Dailyhunt Logo
  • Light mode
    Follow system
    Dark mode
    • Play Story
    • App Story
ಸಚಿವರ ಸಮ್ಮುಖದಲ್ಲೇ ನಕಲಿ ಮತದಾನ ಆರೋಪ: ಪ್ರಕರಣ ದಾಖಲಿಸಲು ಶಾಸಕ ಟೆಂಗಿನಕಾಯಿ ಆಗ್ರಹ

ಸಚಿವರ ಸಮ್ಮುಖದಲ್ಲೇ ನಕಲಿ ಮತದಾನ ಆರೋಪ: ಪ್ರಕರಣ ದಾಖಲಿಸಲು ಶಾಸಕ ಟೆಂಗಿನಕಾಯಿ ಆಗ್ರಹ

Hosadigantha 9 hrs ago

ಹೊಸದಿಗಂತ ವರದಿ ಹುಬ್ಬಳ್ಳಿ:

ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಮೂಲಕ ಮತಗಳ್ಳತನ ಮಾಡಲಾಗುತ್ತಿದೆ ಎಂದು ಆರೋಪಿಸುವ ಕಾಂಗ್ರೆಸ್, ಅಧಿಕಾರಿಗಳ ದುರಪಯೋಗ ಪಡಿಸಿಕೊಂಡು ಪದವೀಧರ ಮತ ಕ್ಷೇತ್ರದ ಚುನಾವಣೆಯಲ್ಲಿ ನಕಲಿ ಮತದಾನ ಮಾಡಿಸಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಾಕ್ಷ್ಯಾಧಾರಗಳಾದ ವಿಡಿಯೋ ದೃಶ್ಯ ಹಾಗೂ ಚಿತ್ರಗಳ ಮೂಲಕ ತೋರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ವಿರುದ್ಧ ಹರಿಹಾಯ್ದರು. ಹಾವೇರಿ ಬೂತ್ ನಂಬರ್ 85 ರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿ ಆಶಾ ಪಾಟೀಲ ಅವರ ಬದಲಿಗೆ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಸದಸ್ಯೆ ಶಿಲ್ಪಾ ಬುಡೇನವರ ಎಂಬುವರು ಮತದಾನ ಮಾಡಿದ್ದಾರೆ. ಅದು ಸಚಿವ ರುದ್ರಪ್ಪ ಲಮಾಣಿ ಅವರ ಜೊತೆಗೆ ಮತದಾನ ಮಾಡಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮುಂದುವರಿದ ಮಳೆ ಆರ್ಭಟ: ಕರಾವಳಿ ಸೇರಿ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಈ ಮತಗಟ್ಟೆಯಲ್ಲಿ ಮತದಾರರ ಗುರುತಿನಿ ಚೀಟಿ ಸರಿಯಾಗಿ ಪರಿಶೀಲಿಸಿಲ್ಲ. ಬಿಜೆಪಿ ಏಜೆಂಟರ್, ತಾಲೂಕು ಅಧ್ಯಕ್ಷರು, ಅಧಿಕಾರಿಗಳಿಗೆ ಈ ವೇಳೆ ಹೋಗಿ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. ಆದರೂ ಸಹ ಅಧಿಕಾರಿಗಳು ಸ್ಪಂದಿಸಿಲ್ಲ. ಕಾಂಗ್ರೆಸ್ ಸರ್ಕಾರ ನಕಲಿ ಮತಗಳ ಹಾಕಿಸಿದೆ ಎಂದು ಹೇಳಿದರು.

ಸಚಿವ ರುದ್ರಪ್ಪ ಲಮಾಣಿ ಅವರ ಜೊತೆಗೆ ಆಗಮಿಸಿ ಮತದಾನ ಮಾಡಿದ್ದು, ನೋಡಿದರೆ ಬಹುಶಃ ಸಚಿವರು ಅಧಿಕಾರಿಗಳ ಮೇಲೆ ಪ್ರಭಾವ ಬಿರಿದ್ದಾರೆ ಎಂಬ ಅನುಮಾನಗಳು ಮೂಡುತ್ತಿವೆ. ಆದ್ದರಿಂದ ನಕಲಿ ಮತದಾನ ಮಾಡಿದವರು ಹಾಗೂ ಇದರ ಹಿಂದೆ ಇರುವವ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು, ಆ ಮತಗಟ್ಟೆ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ್ದು, ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ಅ. 25(ಭಾನುವಾರ) ದೂರು ನೀಡಲಾಗುವುದು ಎಂದು ತಿಳಿಸಿದರು.

ಹಾವೇರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸಚಿವ ರುದ್ರಪ್ಪ ಲಮಾಣಿ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ಅವರ ಪತ್ನಿ ಆಶಾ ಯಾರು ಹಾಗೂ ನಕಲಿ ಮತ ಹಾಕಿದ ಶಿಲ್ಪಾ ಅವರು ಯಾರು ಎಂಬುವುದು ಗೊತ್ತಿದೆ. ಆದರೂ ಸಹ ಮತದಾನ ಮಾಡುವಾಗ ಅವರು ಸುಮ್ಮನಿರುವುದು ಯಕ್ಷ ಪ್ರಶ್ನೆಯಾಗಿದೆ ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Hosadigantha