Dailyhunt
SHOCKING | ನರ್ಮದಾ ನದಿಯಲ್ಲಿ ದುರಂತ: ಪ್ರವಾಸಿಗರ ದೋಣಿ ಮುಳುಗಿ ನಾಲ್ಕು ಮಂದಿ ಸಾ*ವು

SHOCKING | ನರ್ಮದಾ ನದಿಯಲ್ಲಿ ದುರಂತ: ಪ್ರವಾಸಿಗರ ದೋಣಿ ಮುಳುಗಿ ನಾಲ್ಕು ಮಂದಿ ಸಾ*ವು

Hosadigantha 1 week ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧ್ಯಪ್ರದೇಶದ ಜಬಲ್ಪುರ ಜಿಲ್ಲೆ ನರ್ಮದಾ ನದಿಯ ಬಾರ್ಗಿ ಅಣೆಕಟ್ಟೆಯ ಬಳಿ ಪ್ರವಾಸಿಗರಿದ್ದ ಕ್ರೂಸ್ ದೋಣಿ ಮುಳುಗಿ ಕನಿಷ್ಠ 4 ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಸುಮಾರು 30ಕ್ಕೂ ಹೆಚ್ಚು ಪ್ರವಾಸಿಗರಿಂದ ತುಂಬಿದ್ದ ಈ ದೋಣಿಯು ಹಠಾತ್ ಸಂಭವಿಸಿದ ಚಂಡಮಾರುತ ಹಾಗೂ ಬಿರುಗಾಳಿಯಿಂದ ನದಿಯಲ್ಲಿ ನಿಯಂತ್ರಣ ಕಳೆದುಕೊಂಡು ಮಗುಚಿದೆ ಎಂದು ಹೇಳಲಾಗುತ್ತಿದೆ.

ಬೋಟ್​ನಲ್ಲಿದ್ದ ಸುಮಾರು 18 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 15-18 ಜನರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಬರಗಿ ಪಟ್ಟಣ) ಅಂಜುಲ್ ಮಿಶ್ರಾ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha