Dailyhunt Logo
  • Light mode
    Follow system
    Dark mode
    • Play Story
    • App Story
ವಯನಾಡ್ ಭೂಕುಸಿತ: 'ಆದೇಶ ಪಾಲಿಸಿದ್ದರೆ ದುರಂತ ತಪ್ಪುತ್ತಿತ್ತು'; ಸಿಎಂ ಸತೀಶನ್ ಆರೋಪ

ವಯನಾಡ್ ಭೂಕುಸಿತ: 'ಆದೇಶ ಪಾಲಿಸಿದ್ದರೆ ದುರಂತ ತಪ್ಪುತ್ತಿತ್ತು'; ಸಿಎಂ ಸತೀಶನ್ ಆರೋಪ

Hosadigantha 1 week ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯನಾಡ್‌ನ ಮೆಪ್ಪಾಡಿ ಸಮೀಪ ಸುರಂಗ ರಸ್ತೆ ಕಾಮಗಾರಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತ ಕುರಿತು ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್, ಜೂನ್ 20ರಂದೇ ಮಣ್ಣು ತೆರವುಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿತ್ತು.

ಆದರೆ ಆ ಆದೇಶವನ್ನು ಪಾಲಿಸದಿರುವುದು ದುರಂತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಆರೋಪಿಸಿದರು.

ರಕ್ಷಣಾ ಕಾರ್ಯಾಚರಣೆ ಭರದಿಂದ

ಭೂಕುಸಿತದಲ್ಲಿ ಒಬ್ಬರು ಮೃತಪಟ್ಟಿದ್ದು, ಏಳು ಮಂದಿ ಕಾಣೆಯಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಏಳು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವಿಧ ರಕ್ಷಣಾ ತಂಡಗಳು ಸ್ಥಳದಲ್ಲಿ ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿವೆ.

'ಫ್ರೆಶ್', '100% ಆರ್ಗ್ಯಾನಿಕ್' ಲೇಬಲ್‌ ಗಳಿಗೆ ಬ್ರೇಕ್: ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ fssai ನೋಟಿಸ್

'ಮಾನವ ನಿರ್ಮಿತ ದುರಂತ' ಆರೋಪ

ಕಂದಾಯ ಸಚಿವ ಟಿ. ಸಿದ್ದೀಕ್ ಕೂಡ ಈ ಘಟನೆ ಸಹಜ ಪ್ರಕೃತಿ ವಿಕೋಪವಲ್ಲ, ಕಾಮಗಾರಿ ವೇಳೆ ಮಣ್ಣನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿದ ಪರಿಣಾಮ ಉಂಟಾದ ಮಾನವ ನಿರ್ಮಿತ ದುರಂತ ಎಂದು ಹೇಳಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಹೊಣೆಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha