Kannada News Now

1.8M Followers

'ಟ್ವಿಟ್ಟರ್'ಗೆ ಟಕ್ಕರ್ ಕೊಟ್ಟ 'ಕನ್ನಡಿಗ' : ಸೋಷಿಯಲ್ ಮೀಡಿಯಾದಲ್ಲಿ ಕನ್ನಡದ 'Koo App'ನ ಹೊಸ ಕ್ರಾಂತಿ ಶುರು

08 Jul 2020.1:35 PM

ಸ್ಪೆಷಲ್ ಡೆಸ್ಕ್ : ಇಂದು ಸೋಷಿಯಲ್ ಮೀಡಿಯಾ ಅಂದ್ರೆ ಸಾಕು ಅಂಗೈ ನಲ್ಲಿಯೇ ಇಡೀ ವಿಶ್ವವನ್ನು ಮುಂದೆ ನಿಲ್ಲಿಸುವಂತ ಫವರ್ ಪುಲ್ ಮಾಧ್ಯಮವಾಗಿದೆ. ಈ ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಮುಂಚೂಣಿಯಲ್ಲಿ ವಾಟ್ಸ್ ಆಪ್, ಫೇಸ್ ಬುಕ್, ಟ್ವಿಟರ್ ಸೇರಿದಂತೆ ಅನೇಕವು ಇದ್ದರೇ, ಇದಕ್ಕೆ ಟಕ್ಕರ್ ಕೊಡುವಂತೆ ಸ್ವದೇಶಿ, ಕನ್ನಡಿಗರೇ ರಚಿಸಿದಂತ ಆಪ್ ನಿರ್ಮಾಣವಾಗಿದೆ. ಅದೇ ಕೂ ಆಪ್. ಕನ್ನಡ ಭಾಷೆಯಲ್ಲೇ ವ್ಯವಹರಿಸಬಹುದಾದ ಕನ್ನಡದ್ದೇ ಸೋಷಿಯಲ್ ಮೀಡಿ ಈ ಕೂ ಆಪ್. ಅದರ ವಿಶೇಷತೆ ಏನು..? ಹೇಗೆ ಬಳಕೆ ಮಾಡೋದು..? ಸೇರಿದಂತೆ ಇತರೆ ಮಾಹಿತಿಗಾಗಿ ಮುಂದೆ ಓದಿ.

ಕೇಂದ್ರ ಸರ್ಕಾರ ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡಿದೆ. ಇದರ ಬೆನ್ನಲ್ಲೆ ಸ್ವದೇಶಿ ನಿರ್ಮಿತ ಆಪ್ ಗಳ ಆವಿಷ್ಕಾರ ಆರಂಭಗೊಂಡಿದೆ. ಬಗೆ ಬಗೆಯ ಆಪ್ ಗಳ ಆವಿಷ್ಕಾರದ ನಡುವೆ ಕನ್ನಡಿಗರೊಬ್ಬರು ಮಾತೃಭಾಷೆಯಲ್ಲೇ ಬಳಕೆ ಮಾಡುವ ಸಲುವಾಗಿ ಟ್ವಿಟ್ಟರ್ ಗೆ ಸರಿ ಸಮಾನವಾದಂತ ಆಪ್ ಅಭಿವೃದ್ಧಿ ಪಡಿಸಿದ್ದಾರೆ.

ಆ ಆಪ್ ಈಗಾಗಲೇ 3 ಲಕ್ಷಕ್ಕೂ ಅಧಿಕ ಜನರು ತಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಮೂಲಕ ಪರಸ್ಪರ ತಮ್ಮವರನ್ನು ಕನ್ನಡದ ಮಾತೃಭಾಷೆಯಲ್ಲೇ ಸಂಪರ್ಕಿತರಾಗಿದ್ದಾರೆ. ಆ ಆಪ್... Koo App. ಇದರ ನಿರ್ಮಾತೃ, ಕೋ ಫೌಂಡರ್ ಬೇರಾರು ಅಲ್ಲ ನಮ್ಮ ಬೆಂಗಳೂರಿನ ಅಪ್ಪಟ ಕನ್ನಡಿಗ ಅಪ್ರಮೇಯ ರಾಧಾಕೃಷ್ಣ.

ಕೂ ಆಪ್ ನ ಕೋ ಫೌಂಡರ್ ಮತ್ತು ಸಿಇಓ ಆಗಿರುವ ಕನ್ನಡಿಗ ಅಪ್ರಮೇಯ ರಾಧಾಕೃಷ್ಣ ಅವರನ್ನು ನಮ್ಮ ಕನ್ನಡ ನ್ಯೂಸ್ ನೌ ತಂಡ ಮಾಹಿತಿಗಾಗಿ ಸಂಪರ್ಕಿಸಿತು. ಕೂ ಆಪ್ ಅಭಿವೃದ್ಧಿ ಪಡಿಸುವ ನಿರ್ಧಾರ ಬಂದಿದ್ದು ಹೇಗೆ ಎನ್ನುವ ಬಗ್ಗೆ ಪ್ರಶ್ನೆ ಮಾಡಿದಾಗ, ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಪ್ರಾದೇಶಿಕತೆಗಿಂತ ಆಂಗ್ಲಾ ಭಾಷೆಯ ಪ್ರಾಬಲ್ಯತೆಯೇ ತೋರಿ ಬರುತ್ತಿದೆ. ಹೀಗಾಗಿ ಕನ್ನಡಿಗರಿಗೆ, ಕನ್ನಡದಲ್ಲೇ, ತಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸಲು ಸೋಷಿಯಲ್ ಫ್ಲಾಟ್ ಫಾರ್ಮ್ ಕಲ್ಪಿಸಿಕೊಂಡುವಂತ ಚಿಂತನೆ ಹೊಳೆಯಿತು. ಅದರ ಭಾಗವಾಗಿಯೇ ಅಭಿವೃದ್ಧಿಗೊಂಡಿದ್ದೇ ಕೂ ಎನ್ನುವಂತ ಆಪ್..

ಇನ್ನೂ ಇದೇ ಯೋಜನೆಯಿಂದಲೇ ಕನ್ನಡಿಗರು ಕನ್ನಡದಲ್ಲಿಯೇ ವ್ಯವಹರಿಸುವಂತ ಸೋಷಿಯಲ್ ಮೀಡಿಯಾ ರಚನೆಯನ್ನು ಮಾಡಲಾಯ್ತು. ಇಲ್ಲಿ ಕೇವಲ ಮಾತೃಭಾಷೆಯಾದಂತ ಕನ್ನಡಲ್ಲಿಯೇ ವ್ಯವಹರಿಸುವಂತ ಆಯ್ಕೆಗಳನ್ನು ಕನ್ನಡಿಗರಿಗಾಗಿ ನೀಡಲಾಗಿದೆ. ಟ್ವಿಟರ್ ಮಾದರಿಯಲ್ಲಿಯೇ ಪೋಸ್ಟ್, ವೀಡಿಯೋ, ಪೋಟೋ ಕೂ ಆಪ್ ನಲ್ಲಿ ಬಳಕೆದಾರರು ಮಾಡಬಹುದಾಗಿದೆ ಎಂಬುದಾಗಿಯೂ ತಿಳಿಸಿದರು.

ಕಳೆದ ಮೂರು ತಿಂಗಳ ಹಿಂದೆ ಅಭಿವೃದ್ಧಿ ಪಡಿಸಲಾಗಿರುವಂತ ಕೂ ಆಪ್ ಅನ್ನು ಕ್ರಿಕೆಟಿಗ ಜಾವಗಾಲ್ ಶ್ರೀನಾಥ್, ಸ್ಯಾಂಡಲ್ ವುಡ್ ನಟರು, ರಾಜಕೀಯ ಮುಖಂಡರು ಇನ್ಸ್ಟಾಲ್ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ. ಇವರನ್ನು ಅನೇಕ ಅವರ ಅಭಿಮಾನಿಗಳು ಫಾಲೋ ಕೂಡ ಮಾಡುತ್ತಿದ್ದಾರೆ. ಟ್ವಿಟರ್ ಗಿಂತ ಭಿನ್ನ-ವಿಭಿನ್ನವಾಗಿರುವ ಕೂ ಆಪ್ ಟ್ವಿಟರ್ ನಲ್ಲಿ ಕೇವಲ 2 ನಿಮಿಷಗಳ ವರೆಗೆ ಮಾತ್ರ ವೀಡಿಯೋ ಅಪ್ ಲೋಡ್ ಮಾಡಬಹುದಾದರೇ, ಕೂ ಆಪ್ ನಲ್ಲಿ 10 ನಿಮಿಷದವರೆಗಿನ ವೀಡಿಯೋವನ್ನು ಅಪ್ ಲೋಡ್ ಮಾಡಬಹುದಾಗಿದೆ.

ಅಂದಹಾಗೇ ಈಗ ಮೊದಲ ಬಾರಿಗೆ ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್ ವರ್ಷನ್ ಬಿಡುಗಡೆ ಮಾಡಲಾಗಿದ್ದು, ಮುಂದಿನ ವಾರದಲ್ಲಿ ಐಒಎಸ್ ವರ್ಷನ್ ಕೂಡ ಆಪಲ್ ಪೋನ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂಬುದಾಗಿ ಕೂ ಆಪ್ ಕೋ ಫೌಂಡರ್ ಹಾಗೂ ಸಿಇಓ ಅಪ್ರಮೇಯ ರಾಧಾಕೃಷ್ಣ ತಿಳಿಸಿದ್ದಾರೆ.

ಕೂ ಆಪ್ ಬಿಡುಗಡೆಯಾದ ಮೂರೇ ತಿಂಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕನ್ನಡಿಗರು ಬಳಕೆ ಮಾಡಲು ಆರಂಭಿಸಿದ್ದಾರೆ. ಕನ್ನಡಲ್ಲಿಯೇ ಎಲ್ಲಾ ಕೆಟಗರಿಯನ್ನು ಹೊಂದಿರುವ ಕೂ ಆಪ್, ಕನ್ನಡ ತನವನ್ನು, ಕನ್ನಡಿಗರಿಗೆ ಕನ್ನಡದಲ್ಲಿಯೇ ವ್ಯವಹಸಿವು ಸೌಲಭ್ಯ ಒದಗಿಸಿದೆ. ಈ ಮೂಲಕ ಕನ್ನಡದಲ್ಲಿಯೇ ಕನ್ನಡಿಗರು ಕನ್ನಡ ಭಾಷೆಯಲ್ಲಿಯೇ ಬಳಕೆ ಮಾಡುವಂತ ಕೂ ಆಪ್ ನಿರ್ಮಿಸಿದ ಕೀರ್ತಿ ಅಪ್ರಮೇಯ ರಾಧಾಕೃಷ್ಣ ಅವರಿಗೆ ಸಲ್ಲುತ್ತದೆ.

ಇಂತಹ Koo App ನೀವು ಕೂಡ ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರಿನಿಂದ https://play.google.com/store/apps/details?id=com.koo.app ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಡೌನ್ ಲೋಡ್ ಮಾಡಿಕೊಂಡು ಬಳಕೆ ಮಾಡಿ. ನಮ್ಮ ಹೆಮ್ಮೆಯ ಕನ್ನಡಿಗರಿಗಾಗಿ ನಿರ್ಮಿಸಿದ ಈ ಸೋಷಿಯಲ್ ಮೀಡಿಯಾ ಆಪ್ ಮೂಲಕ ನಿಮ್ಮವರ ಜೊತೆಗೆ ಸಂಪರ್ಕ ಬೆಳೆಸೋದು ಮರೆಯಬೇಡಿ.

ವರದಿ : ವಸಂತ ಬಿ ಈಶ್ವರಗೆರೆ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags