Thursday, 03 Dec, 9.16 am ಕನ್ನಡ ಧ್ವನಿ ನ್ಯೂಸ್

Posts
ಲಂಕಾ ಪ್ರೀಮಿಯರ್‌ ಲೀಗ್‌ನಲ್ಲಿ ಪಾಲ್ಗೊಂಡ ಸ್ಟಾರ್ ಕ್ರಿಕೆಟಿಗರ ವೇತನ ಬಹಿರಂಗ!

ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್‌ ಲೀಗ್‌ ಟೂರ್ನಿಯು ಕಳೆದ ವಾರ ಅದ್ಧೂರಿ ಆರಂಭ ಪಡೆದಿದ್ದು, ಹಂಬನತೋಟದ ಮಹಿಂದಾ ರಾಜಪಕ್ಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟೂರ್ನಿಯ ಎಲ್ಲ ಪಂದ್ಯಗಳು ಬಯೋ ಸೆಕ್ಯೂರ್‌ ವಾತಾವರಣದ ಅಡಿಯಲ್ಲಿ ನಡೆಯುತ್ತಿದೆ.

ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಮುಂದೂಡಲ್ಪಟ್ಟಿದ್ದ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಆಯೋಜನೆಯ ಮಹತ್ವಾಕಾಂಕ್ಷೀಯ ಎಲ್‌ಪಿಎಲ್‌ 2020 ಟೂರ್ನಿ ಕೆನೆಗೂ ಶುರುವಾಗಿದ್ದು, ನಿರೀಕ್ಷೆಯಂತೆ ಕೆಲ ದೈತ್ಯ ಅಂತಾರಾಷ್ಟ್ರೀಯ ಕ್ರಿಕೆಟಿಗರು ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.ಕ್ರಿಸ್‌ ಗೇಲ್‌, ರವಿ ಬೊಪಾರ ಹಾಗೂ ಲಸಿತ್‌ ಮಾಲಿಂಗ ಅವರಂತಹ ದಿಗ್ಗಜರು ಹಿಂದೆ ಸರಿದರೂ ಕೂಡ, ಶಾಹಿದ್‌ ಅಫ್ರಿದಿ, ಆಂಡ್ರೆ ರಸೆಲ್, ಡೇಲ್‌ ಸ್ಟೇನ್ ಮತ್ತು ಇರ್ಫಾನ್‌ ಪಠಾಣ್‌ ಅವರಂತಹ ತಾರೆಗಳು ಟೂರ್ನಿಯಲ್ಲಿ ಪಾಲ್ಗೊಂಡು ಲಂಕಾ ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇವರಲ್ಲದೆ ಸೊಹೇಲ್‌ ತನ್ವೀರ್‌, ಏಂಜಲೊ ಮ್ಯಾಥ್ಯೂಸ್‌, ಕಾರ್ಲೋಸ್‌ ಬ್ರಾತ್‌ವೇಟ್‌, ಕಾಲಿನ್‌ ಇಂಗ್ರಮ್, ಲೆಂಡ್ಲ್‌ ಸಿಮನ್ಸ್‌, ಮೊಹಮ್ಮದ್‌ ಹಫೀಝ್ ಮತ್ತು ಶೊಯೇಬ್‌ ಮಲಿಕ್‌ ಕೂಡ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.ಚೊಚ್ಚಲ ಆವೃತ್ತಿಯ ಎಲ್‌ಪಿಎಲ್‌ನಲ್ಲಿ ಒಟ್ಟು 30 ಮಂದಿ ವಿದೇಶಿ ಆಟಗಾರರು ಪಾಲ್ಗೊಂಡಿದ್ದಾರೆ. ಐದು ಫ್ರಾಂಚೈಸಿ ತಂಡಗಳನ್ನು ಒಳಗೊಂಡಿರುವ ಟೂರ್ನಿಯಲ್ಲಿ ಜಾಫ್ನಾ ಸ್ಟಾಲಿಯನ್ಸ್‌, ಕ್ಯಾಂಡಿ ಟಸ್ಕರ್ಸ್‌, ಗಾಲೆ ಗ್ಲಾಡಿಯೇಟರ್ಸ್‌, ಕೊಲಂಬೊ ಕಿಂಗ್ಸ್‌ ಮತ್ತು ಡಂಬುಲಾ ಹಾಕ್ಸ್‌ ತಂಡಗಳು ಟ್ರೋಫಿಗಾಗಿ ಪೈಪೋಟಿ ನಡೆಸುತ್ತಿವೆ. ಐಪಿಎಲ್‌ನಂತೆ ಎಲ್‌ಪಿಎಲ್‌ನಲ್ಲೂ ಪ್ರತಿ ಫ್ರಾಂಚೈಸಿ ತಂಡವು ತನ್ನ ಆಡುವ 11ರ ಬಳಗದಲ್ಲಿ 4 ವಿದೇಶಿ ಆಟಗಾರರನ್ನು ಮಾತ್ರವೇ ಆಡಿಸಲು ಅವಕಾಶ ನೀಡಲಾಗಿದೆ.ಇದೇ ವೇಳೆ ಲಂಕಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಾಲ್ಗೊಂಡ ಆಟಗಾರರ ವೇತನ ಎಷ್ಟು ಎಂಬುದರ ಮಾಹಿತಿ ಇದೀಗ ಬಹಿರಂಗವಾಗಿದೆ. ವಿಶ್ವದ ಐಶಾರಾಮಿ ಟಿ20 ಟೂರ್ನಿ ಆಗಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಟಗಾರರಿಗೆ ಸಿಗುವ ವೇತನಕ್ಕೆ ಹೋಲಿಸಿದರೆ ಎಲ್‌ಪಿಎಲ್‌ನಲ್ಲಿನ ಅಟಗಾರರ ವೇತನ ಬಿಡಿಗಾಸಿನ ಲೆಕ್ಕದಲ್ಲಿ ಲಭ್ಯವಾಗಿದೆ ಎನ್ನಬಹುದು.ಟೂರ್ನಿಯಲ್ಲಿ ಪಾಲ್ಗೊಂಡ ಆಟಗಾರರ ವೇತನ ವಿವರ ಹೀಗಿದೆ

44,27 ಲಕ್ಷ ರೂಪಾಯಿ ($60,000): ದಸುನ್ ಶನಕ, ಕುಸಲ್ ಪೆರೆರಾ, ಏಂಜಲೊ ಮ್ಯಾಥ್ಯೂಸ್, ತಿಸಾರ ಪೆರೆರಾ

36,89 ಲಕ್ಷ ರೂಪಾಯಿ ($50,000): ಲೆಂಡ್ಲ್ ಸಿಮನ್ಸ್, ಶಾಹಿದ್ ಅಫ್ರಿದಿ, ಮೊಹಮ್ಮದ್ ಹಫೀಝ್, ಇರ್ಫಾನ್ ಪಠಾಣ್, ಅಂಡ್ರೆ ರಸೆಲ್, ವಾನಿದು ಹಸರಂಗ ಡಿ' ಸಿಲ್ವಾ, ಡೇಲ್ ಸ್ಟೇನ್.

29,51 ಲಕ್ಷ ರೂಪಾಯಿ ($40,000): ಸುದೀಪ್ ತ್ಯಾಗಿ, ಹಝರತ್ ಉಲ್ಲಾ ಝಝಾಯ್, ಮನ್‌ಪ್ರೀತ್ ಸಿಂಗ್ ಗೂನಿ, ಶೊಯೇಬ್ ಮಲಿಕ್, ನಿರೋಷನ್ ಡಿಕ್ವೆಲ್ಲಾ, ದನುಷ್ಕ ಗುಣತಿಲಾಕ, ಕುಸಲ್ ಮೆಂಡಿಸ್, ಇಸರು ಉದಾನ, ಅವಿಷ್ಕಾ ಫರ್ನಾಂಡೊ.18,44 ಲಕ್ಷ ರೂಪಾಯಿ ($25,000): ಸಮಿತ್ ಪಟೇಲ್, ಮೊಹಮ್ಮದ್ ಆಮಿರ್, ಜಾನ್ಸನ್ ಚಾರ್ಲ್ಸ್, ಉಝ್ಮಾನ್ ಶಿನ್ವಾರಿ, ಲಾಹಿರು ಕುಮಾರ, ಭನುಕಾ ರಾಜಪಕ್ಸ, ನುವಾನ್ ಪ್ರದೀಪ್, ದಿನೇಶ್ ಚಾಂದಿಮಾಲ್, ಧನಂಜಯ ಡಿ'ಸಿಲ್ವಾ, ಓಷಾದಾ ಫರ್ನಾಂಡೊ, ಅಖಿಲ ಧನಂಜಯ, ಸೀಕುಗೆ ಪ್ರಸನ್ನ, ಅಮಿಲಾ ಅಪೊನ್ಸೊ, ಸುರಂಗ ಲಕ್ಷಮಲ್, ಕಸುನ್ ರಜಿತ, ಮಿಲಿಂಡ ಸಿರಿವರ್ಧನೆ, ಅಸೆಲಾ ಗುಣರತ್ನೆ, ಆಶಾನ್ ಪ್ರಿಯಾಂಜನ್, ಬಿನುರಾ ಫರ್ನಾಂಡೊ.11,06 ಲಕ್ಷ ರೂಪಾಯಿ ($15,000): ಬ್ರೆಂಡನ್ ಟೇಲರ್, ಸರ್ಫರಾಝ್ ಅಹ್ಮದ್, ನವೀನ್ ಉಲ್ ಹಕ್, ರವೀಂದ್ರಪಾಲ್ ಸಿಂಗ್, ಪಾಲ್ ಸ್ಟೆರ್ಲಿಂಗ್, ಆಝಮ್ ಖಾನ್, ರೆಹಮಾನ್ ಉಲ್ಲಾ ಗುರ್ಬಾಝ್, ಖೈಸ್ ಅಹ್ಮದ್, ಕೈಲ್ ಅಬಾಟ್, ಲಹೀರು ಮಧುಶಂಕಾ, ಲಕ್ಷಣ್ ಸಂದಕನ್, ಕಮಿಂದು ಮೆಂಡಿಸ್, ದುಷ್ಮಾಂತ ಚಾಮೀರ, ಡುವಾನ್ ಒಲಿವರ್, ಉಪುಲ್ ತರಂಗ, ಶೆಹಾನ್ ಜಯಸೂರ್ಯ, ದಿಲ್ರುವಾನ್ ಪೆರೆರಾ, ಜೆಫ್ರಿ ವಾಂಡರ್ಸೆ, ಚತುರಂಗ ಡಿ'ಸಿಲ್ವಾ, ಏಂಜಲೊ ಪೆರೆರಾ, ಅಸಿತಾ ಫರ್ನಾಂಡೊ, ಪ್ರಿಯಾಮಲ್ ಪೆರೆರಾ, ತಿಕ್ಷಿಲಾ ಡಿ'ಸಿಲ್ವಾ, ಮಿನೋದ್ ಭಾನುಕಾ, ರಮೇಶ್ ಮೆಂಡಿಸ್, ನುವಾನ್ ತುಶಾರ, ಕವಿಷ್ಕ ಅಂಜುಲಾ, ತಾರಿಂದು ಕೌಶಾಲ್, ಮಹೇಶ್ ತೀಕ್ಷಣ, ಪುಲಿನ ತರಂಗ, ಮೊಹಮ್ಮದ್ ಸಿರಾಝ್, ಲಸಿತ್ ಎಂಬುಲ್ದೇನಿಯಾ, ಲಾಹಿರು ಉದಾರ, ಚರಿತ್ ಅಸಲಂಕಾ.2,21 ಲಕ್ಷ ರೂಪಾಯಿ ($3,000): ಆಶೆನ್ ಬಂಡಾರ, ಧನಂಜಯ ಲಕ್ಷಣ್, ಲಾಹಿರು ಸಮರಕೂನ್, ಹಿಮೇಶ್ ರಾಮನಾಯಕ, ನುವಾನಿದು ಫರ್ನಾಂಡೊ, ದಿಲ್ಶನ್ ಮಧುಶಂಕ, ಚಾಣಕ ರುವಾನ್ಸಿರಿ, ನಿಶಾನ್ ಮದುಷ್ಕ, ಕಲಾಣ ಪೆರೆರಾ, ಕನಕರತ್ನಂ ಕಪಿಲ್ರಾಜ್, ಕವಿಂದು ನವೀಶಾನ್, ಸಹಾನ್ ಅರಾಚ್ಚಿ, ಚಮಿಕ್ರ ಎದಿರಿಸಿಂಘೆ, ತಾರಿಂದು ರತ್ನಾಯಕೆ, ತೆವೇಂದ್ರಿಯಂ ಧಿನೋಶನ್, ಸಾಜಿಂದು ಕೊಲಂಬಾಗೆ, ದುವಿಂದು ತಿಲಕರತ್ನೆ, ಇಶಾನ್ ಜಯರತ್ನೆ, ನವೋದ್ ಪರನವಿತನ, ಯಿವಕಾಂತ್ ವಿಯಸ್ಕಾಂತ್.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: kannada dhvani nyus
Top