ಕನ್ನಡದುನಿಯಾ
ಕನ್ನಡದುನಿಯಾ

1 ರಿಂದ 9 ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ: ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್ ಮಾಡಲು ಚಿಂತನೆ.?

1 ರಿಂದ 9 ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ: ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್ ಮಾಡಲು ಚಿಂತನೆ.?
  • 710d
  • 123 shares

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಏರುತ್ತಿರುವ ಹಿನ್ನೆಲೆಯಲ್ಲಿ ಒಂದರಿಂದ 9 ನೇ ತರಗತಿಯ ಮಕ್ಕಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಚಿಂತನೆ ನಡೆದಿದೆ.

ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿದ್ದು, ಕೆಲವು ರಾಜ್ಯಗಳಲ್ಲಿ ಕೂಡ ಬೋರ್ಡ್ ಪರೀಕ್ಷೆ ರದ್ದು ಮಾಡಲಾಗಿದೆ. ರಾಜ್ಯದಲ್ಲಿ ಮೌಲ್ಯಾಂಕನ ಮೂಲಕ ಒಂದರಿಂದ 9ನೇ ತರಗತಿ ಮಕ್ಕಳನ್ನು ಪಾಸ್ ಮಾಡಲು ಚರ್ಚೆ ನಡೆದಿದ್ದು, ಮೌಲ್ಯಾಂಕನ ಪರೀಕ್ಷೆ ಕೂಡ ಇಲ್ಲದೆ ಎಲ್ಲರನ್ನು ಪಾಸ್ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಒಂದರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡುವ, ಇಲ್ಲವೇ ಮೌಲ್ಯಂಕನ ಪರೀಕ್ಷೆ ನಡೆಸುವ ಕುರಿತು ಎರಡು ದಿನದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

No Internet connection

Link Copied