ಕನ್ನಡದುನಿಯಾ
1.5M Followersಉದ್ಯೋಗದ ಹುಡುಕಾಟ ನಡೆಸುತ್ತಿರುವ 10, 12ನೇ ತರಗತಿ ಪಾಸಾದವರಿಗೆ ಬಂಪರ್ ಸುದ್ದಿಯೊಂದು ಇಲ್ಲಿದೆ. ಅಂಚೆ ಇಲಾಖೆಯು 98,083 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಈ ಪೈಕಿ 59,099 ಪೋಸ್ಟ್ ಮ್ಯಾನ್ ಹುದ್ದೆಗಳು,1,445 ಪುರುಷ ಗಾರ್ಡ್ ಹುದ್ದೆಗಳಾಗಿದ್ದು, ಉಳಿದ ಹುದ್ದೆಗಳು ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಯದ್ದಾಗಿದೆ.
10, 12ನೇ ತರಗತಿ ಪಾಸ್ ಆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ವೇತನ 33,718 - 35,370 ರೂಪಾಯಿಗಳಾಗಿದೆ. ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ ನೂರು ರೂಪಾಯಿಗಳಾಗಿದ್ದು, ಮಹಿಳೆಯರು, ಎಸ್ಸಿ ಎಸ್ಟಿ, ಮಂಗಳಮುಖಿಯರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಅಂಚೆ ಇಲಾಖೆಯ ವೆಬ್ಸೈಟ್ www.indiapost.gov.in ಗೆ ಭೇಟಿ ನೀಡಬಹುದಾಗಿದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada Dunia