Dailyhunt Logo
  • Light mode
    Follow system
    Dark mode
    • Play Story
    • App Story
ಆತಂಕಕ್ಕೆ ಕಾರಣವಾಗಿದೆ ನಿಗೂಢ ಸದ್ದು: ಭೂಕಂಪನ ಅಲ್ಲವೆಂದ ಭೂಗರ್ಭ ಶಾಸ್ತ್ರಜ್ಞರು

ಆತಂಕಕ್ಕೆ ಕಾರಣವಾಗಿದೆ ನಿಗೂಢ ಸದ್ದು: ಭೂಕಂಪನ ಅಲ್ಲವೆಂದ ಭೂಗರ್ಭ ಶಾಸ್ತ್ರಜ್ಞರು

ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂದು ರಾತ್ರಿ 10:15 ರ ಸುಮಾರಿಗೆ ನಿಗೂಢ ಸದ್ದು ಕೇಳಿ ಬಂದಿದ್ದು, ಭೂಕಂಪವಾಯಿತು ಎಂದು ಭಾವಿಸಿದ ಸಾರ್ವಜನಿಕರು ಮನೆಯಿಂದ ಹೊರಗೋಡಿ ಬಂದಿದ್ದಾರೆ.

ಮನೆಯಿಂದ ಹೊರಬಂದ ಸಾರ್ವಜನಿಕರು ತಮ್ಮ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದು, ಬಹುತೇಕ ಎಲ್ಲರೂ ಭೂಕಂಪನವಾಗಿದೆ ಎಂದು ಭಾವಿಸಿದ್ದರು. ಆದರೆ ಭೂಗರ್ಭ ಶಾಸ್ತ್ರಜ್ಞ ಎಚ್.ಎಸ್.ಎಂ. ಪ್ರಕಾಶ್ ಹೇಳಿರುವ ವಿಷಯ ಈಗ ಆತಂಕಕ್ಕೆ ಕಾರಣವಾಗಿದೆ.

ಪ್ರಕಾಶ್ ಅವರು ಹೇಳಿರೋ ಪ್ರಕಾರ ಇಡೀ ವಿಶ್ವದಲ್ಲಿ ಇಂದು ಗ್ರೀಸ್ ನಲ್ಲಿ ಮಾತ್ರ ಅತ್ಯಲ್ಪ ಪ್ರಮಾಣದಲ್ಲಿ ಭೂಕಂಪನವಾಗಿದ್ದು, ಇನ್ನು ಯಾವುದೇ ಕಡೆ ಭೂಕಂಪನ ಆಗಿಲ್ಲವೆಂದು ತಿಳಿಸಿದ್ದಾರೆ. ಹೀಗಾಗಿ ಇಂದು ರಾತ್ರಿ ಕೇಳಿಬಂದಿರುವ ನಿಗೂಢ ಸದ್ದು ಯಾವ ಕಾರಣಕ್ಕೆ ಎಂಬುದು ಈಗ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia