Dailyhunt
ಅಭಿಮಾನಿಗೆ ಕೊಟ್ಟಮಾತು ಉಳಿಸಿಕೊಂಡ ವಿಜಯ್ ದೇವರಕೊಂಡ

ಅಭಿಮಾನಿಗೆ ಕೊಟ್ಟಮಾತು ಉಳಿಸಿಕೊಂಡ ವಿಜಯ್ ದೇವರಕೊಂಡ

ಇಂಡಿಯನ್ ಐಡಲ್ 12ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ತಮ್ಮನ್ನು ಭಾರಿ ಪ್ರೀತಿಸುವ ಸ್ಪರ್ಧಿ ಷಣ್ಮುಖಪ್ರಿಯಗೆ ತೆಲುಗು ಸೂಪರ್‌ಸ್ಟಾರ್ ಶುಭಾಶಯ ಕೋರುವ ವಿಡಿಯೊ ಸಂದೇಶ ಕಳುಹಿಸಿದ್ದರು. ಕಾರ್ಯಕ್ರಮದ ಫೈನಲ್ ಹಂತದಲ್ಲಿ ಆಕೆಗೆ ವಿಜಯ್ ಅವರು ತಮ್ಮ ಚಿತ್ರದಲ್ಲಿ ಹಾಡುವ ಅವಕಾಶ ನೀಡುವ ಭರವಸೆ ಕೂಡ ಕೊಟ್ಟಿದ್ದರು.
ಅದೇ ರೀತಿ ಕೊಟ್ಟಮಾತು ಉಳಿಸಿಕೊಂಡಿದ್ದಾರೆ.

ಬಟ್ಟೆ ಬದಲಿಸುವ ಕೋಣೆಯಲ್ಲಿ ತುಂಡುಡುಗೆಯ ವಿಡಿಯೋ ಹಂಚಿಕೊಂಡ ನಟಿ ಊರ್ವಶಿ

ತಮ್ಮ ಮುಂದಿನ ಸಿನಿಮಾ 'ಲೈಗರ್'ನಲ್ಲಿ ಲಿಟಲ್ ರಾಕ್‍ ಸ್ಟಾರ್ ಷಣ್ಮುಖಪ್ರಿಯ ಹಾಡಿದ್ದಾಳೆ. ಆಕೆ ಹೈದರಾಬಾದ್‍ಗೆ ಕುಟುಂಬ ಸಮೇತ ಬಂದು, ರೆಕಾರ್ಡಿಂಗ್‍ನಲ್ಲಿ ಭಾಗಿಯಾಗಿದ್ದಾಳೆ ಎಂದ ವಿಜಯ್ ದೇವರಕೊಂಡ ಅವರು ಇನ್‍ಸ್ಟಾಗ್ರಾಂನಲ್ಲಿ ಸಂತಸ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಆ.15ರಂದು ಇಂಡಿಯನ್ ಐಡಲ್ 12ನೇ ಆವೃತ್ತಿ ಪೂರ್ಣಗೊಂಡಿತು. ಖ್ಯಾತ ಯುವ ಗಾಯಕ ಪವನ್‍ದೀಪ್ ರಂಜನ್ ಅವರು ಷಣ್ಮುಖಪ್ರಿಯ ಸೇರಿದಂತೆ ಆರು ಯುವ ಗಾಯಕರೊಂದಿಗೆ ಪೈಪೋಟಿ ನಡೆಸಿದ್ದರು. ಷಣ್ಮುಖಪ್ರಿಯಗೆ ಆರನೇ ಸ್ಥಾನ ದೊರೆತಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Kannada Dunia