Dailyhunt
ಅಗ್ನಿವೀರ್ ಜನರಲ್ ಡ್ಯೂಟಿ, ಕ್ಲರ್ಕ್ ಸೇರಿ ವಿವಿಧ ಹುದ್ದೆಗಳಿಗೆ ಮಂಗಳೂರು ಸೇನಾ ನೇಮಕಾತಿ ಕಚೇರಿಯಿಂದ ಅರ್ಜಿ ಆಹ್ವಾನ

ಅಗ್ನಿವೀರ್ ಜನರಲ್ ಡ್ಯೂಟಿ, ಕ್ಲರ್ಕ್ ಸೇರಿ ವಿವಿಧ ಹುದ್ದೆಗಳಿಗೆ ಮಂಗಳೂರು ಸೇನಾ ನೇಮಕಾತಿ ಕಚೇರಿಯಿಂದ ಅರ್ಜಿ ಆಹ್ವಾನ

ದಾವಣಗೆರೆ: ಸೇನಾ ನೇಮಕಾತಿ ಕಚೇರಿ ಮಂಗಳೂರು (ದಕ್ಷಿಣ ಕನ್ನಡ) ವತಿಯಿಂದ ಸೇನಾ ನೇಮಕಾತಿ ರ‍್ಯಾಲಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ನೋಂದಣಿ ಪ್ರಕ್ರಿಯೆಯು www.joinindianarmy.nic.in ವೆಬ್ ಸೈಟ್ ಮೂಲಕ ಫೆಬ್ರವರಿ 13 ರಿಂದ ಅರ್ಜಿ ಸಲ್ಲಿಸಬಹುದು.

ನೋಂದಣಿ 48 ಗಂಟೆಗಳ ಒಳಗೆ ಜೈ ಹಿಂದ್ ಖಾತೆಯನ್ನು ಮತ್ತು ರೂ.250/- ನೋಂದಣಿ ಶುಲ್ಕವನ್ನು ಪಾವತಿಸಬೇಕು.

ಆಪ್ಲಿಕೇಶನ್ ವರ್ಗಗಳು:

ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಕ್ಲರ್ಕ್, ಎಸ್.ಕೆ.ಟಿ, ಅಗ್ನಿವೀರ್ ತಾಂತ್ರಿಕ, ಅಗ್ನಿವೀರ್ ಟಿಡಿಎನ್ 10, ಅಗ್ನಿವೀರ್ ಟಿಡಿಎನ್ 8ನೇ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ https://www.joinindianrmy.nic.in ಹಾಗೂ ದೂ.ಸಂ:0824-2951276, 07411497644 ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia