Dailyhunt
ಐಪಿಎಲ್ ಪಂದ್ಯ ವೇಳೆ ಜನಸಂದಣಿ ನಿಯಂತ್ರಣಕ್ಕೆ ಮತ್ತೊಂದು ಕ್ರಮ: ಚಿನ್ನಸ್ವಾಮಿ ಸ್ಟೇಡಿಯಂನಿಂದ ವಿವಿಧೆಡೆಗೆ ವಿಶೇಷ ಬಸ್ ವ್ಯವಸ್ಥೆ

ಐಪಿಎಲ್ ಪಂದ್ಯ ವೇಳೆ ಜನಸಂದಣಿ ನಿಯಂತ್ರಣಕ್ಕೆ ಮತ್ತೊಂದು ಕ್ರಮ: ಚಿನ್ನಸ್ವಾಮಿ ಸ್ಟೇಡಿಯಂನಿಂದ ವಿವಿಧೆಡೆಗೆ ವಿಶೇಷ ಬಸ್ ವ್ಯವಸ್ಥೆ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 5 ರಂದು ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಐಪಿಎಲ್ ಪಂದ್ಯ ನಡೆಯಲಿದೆ.

ಐಪಿಎಲ್ ಪಂದ್ಯ ವೀಕ್ಷಿಸಲು ಬರುವವರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ನಿಂದ ಮೆಟ್ರೋ ರೈಲುಗಳ ಸಮಯ ವಿಸ್ತರಿಸಲಾಗಿದೆ.

ಜನಸಂದಣಿ ನಿಯಂತ್ರಿಸುವ ನಿಟ್ಟಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ವಿವಿಧೆಡೆಗೆ ಬಿಎಂಟಿಸಿ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಿಂದ ಕಾಡುಗೋಡಿ ಬಸ್ ನಿಲ್ದಾಣ, ಹೆಚ್‌ಎಎಲ್ ರಸ್ತೆ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಜನಪ್ರಿಯ ಟೌನ್ ಶಿಪ್, ಮಾಗಡಿ ರಸ್ತೆ, ಆರ್.ಕೆ. ಹೆಗಡೆ ನಗರ, ಯಲಹಂಕ, ಹೊಸಕೋಟೆ, ಬನಶಂಕರಿಗೆ ವಿಶೇಷ ಬಿಎಂಟಿಸಿ ಬಸ ಗಳು ಸಂಚರಿಸಲಿವೆ.

ಈ ವಿಶೇಷ ಬಸ್ಗಳು ಸಿಟಿಓ ಜಂಕ್ಷನ್ ನಿಂದ ಬಿ.ಆರ್.ವಿ. ಜಂಕ್ಷನ್ ವರೆಗೆ ರಸ್ತೆಯ ಎಡ ಭಾಗದಲ್ಲಿ ನಿಲುಗಡೆಯಾಗಲಿವೆ. ಸಾರ್ವಜನಿಕರು ವಿಶೇಷ ಬಸ್ ವ್ಯವಸ್ಥೆ ಸದುಪಯೋಗ ಪಡೆದುಕೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಸುರಕ್ಷತೆಯ ದೃಷ್ಟಿಯಿಂದ ಕ್ರೀಡಾಂಗಣಕ್ಕೆ ಕೆಲವು ವಸ್ತುಗಳ ತರುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia