Thursday, 21 Jan, 10.37 pm ಕನ್ನಡದುನಿಯಾ

ಹೋಮ್
ಅಮೆರಿಕ ನೂತನ ಅಧ್ಯಕ್ಷ ಜೋ ಬಿಡೆನ್​ರ ವೇತನ ಎಷ್ಟು ಗೊತ್ತಾ.?

ಅಮೆರಿಕದ 49ನೇ ಅಧ್ಯಕ್ಷರಾಗಿ ಜೋ ಬಿಡೆನ್​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶ್ವೇತ ಭವನದಲ್ಲಿ ನೆಲೆಸಲಿರುವ ಜೋ ಬಿಡೆನ್​ಗೆ ಸರ್ಕಾರದಿಂದ ಯಾವ್ಯಾವ ಸೌಕರ್ಯಗಳು ಸಿಗಲಿದೆ ಅನ್ನೋ ಕುತೂಹಲ ಎಲ್ಲರಲ್ಲಿದೆ.

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್​ ವಾರ್ಷಿಕ 2 ಕೋಟಿ 32 ಲಕ್ಷ ರೂಪಾಯಿಯನ್ನ ಸಂಬಳದ ರೂಪದಲ್ಲಿ ಪಡೆಯಲಿದ್ದಾರೆ.

ಕಳೆದ ವರ್ಷದ ನವೆಂಬರ್​ ತಿಂಗಳಲ್ಲಿ 78ನೇ ವರ್ಷದ ಜನ್ಮದಿನಾಚರಣೆ ಆಚರಿಸಿಕೊಂಡಿರುವ ಜೋ ಬಿಡೆನ್​ ಅಮೆರಿಕ ಕಂಡ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದಾರೆ.

ಜೋ ಬಿಡೆನ್​ ತಮ್ಮ 29ನೇ ವಯಸ್ಸಿನಲ್ಲಿಯೇ ಸೆನೆಟ್​ ಸದಸ್ಯರಾಗಿ ಆಯ್ಕೆಯಾಗಿದ್ದರು. ಜೋ ಬಿಡೆನ್​ ಮೂರನೇ ಬಾರಿಯ ಪ್ರಯತ್ನದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top