Dailyhunt
ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದ ತಮ್ಮ

ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದ ತಮ್ಮ

ಹುಬ್ಬಳ್ಳಿ: ಒಂದು ಎಕರೆ ಜಾಗದ ವಿಚಾರವಾಗಿ ತಮ್ಮನೊಬ್ಬ ತನ್ನ ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ.

39 ವರ್ಷದ ಮೈಲಾರಿ ತಿರ್ಲಾಪುರ ಮೃತ ದುರ್ದೈವಿ. ಆಸ್ತಿ ವಿಚಾರವಾಗಿ ದೊಡ್ಡಪ್ಪನ ಮಗನನ್ನೇ ರವಿ ತಿರ್ಲಾಪುರ ಎಂಬಾತ ಹತ್ಯೆ ಮಾಡಿದ್ದಾನೆ.

ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ರವಿ ತನ್ನ ಅಣ್ಣ ಮೈಲಾರಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia