Dailyhunt
ಅಪ್ರಾಪ್ತನ ಮೇಲೆ 114 ಬಾರಿ ಚಾಕು ಇರಿದ ಬಾಲಕ..!

ಅಪ್ರಾಪ್ತನ ಮೇಲೆ 114 ಬಾರಿ ಚಾಕು ಇರಿದ ಬಾಲಕ..!

ಅಮೆರಿಕಾದ ಫ್ಲೋರಿಡಾದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಅಪ್ರಾಪ್ತನನ್ನು ನಿರ್ದಯವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ವ್ಯಕ್ತಿ ಕೂಡ ಅಪ್ರಾಪ್ತನೆಂದು ಮೂಲಗಳು ಹೇಳಿವೆ.

ಟ್ರಿಸ್ಟಿನ್ ಹತ್ಯೆ ನಂತ್ರ ಪೊಲೀಸರು ಎಡನ್ ನನ್ನು ಬಂಧಿಸಿದ್ದಾರೆ. ಟ್ರಿಸ್ಟಿನ್, ಎಡಿನ್ ಮೇಲೆ ಒಂದಲ್ಲ ಎರಡಲ್ಲ ಬರೋಬ್ಬರಿ 114 ಬಾರಿ ಚಾಕುವಿನಿಂದ ದಾಳಿ ಮಾಡಿದ್ದಾನೆ. ಆರಂಭದಲ್ಲಿ ಸಣ್ಣದಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಎಡನ್ ಗೆ ಕೋರ್ಟ್ ಜೈಲು ಶಿಕ್ಷೆ ನೀಡಿದೆ. ಅಪ್ರಾಪ್ತ ಎಂಬ ಕಾರಣಕ್ಕೆ ಕೋರ್ಟ್ ಯಾವುದೇ ವಿನಾಯತಿ ನೀಡಿಲ್ಲ.

ಮರಣೋತ್ತರ ಪರೀಕ್ಷೆಯಲ್ಲಿ 114 ಗಾಯಗಳು ಕಾಣಿಸಿವೆ. ಕೈ ಹಾಗೂ ತಲೆಗೆ 49 ಬಾರಿ ಇರಿಯಲಾಗಿದೆ. ಚಾಕುವಿನ ತುದಿ ಮುರಿದಿದೆ. ಮರಣೋತ್ತರ ಪರೀಕ್ಷೆ ವೇಳೆ ಅದು ಟ್ರಿಸ್ಟಿನ್ ದೇಹದಲ್ಲಿ ಸಿಕ್ಕಿದೆಯಂತೆ.

ಪ್ರಕರಣದ ವಿಚಾರಣೆ ನಡೆಯುತ್ತಿದೆ. ಎಡಿನ್ ಇಷ್ಟು ಕೋಪಗೊಳ್ಳಲು ಕಾರಣವೇನು ಎಂಬುದು ಪತ್ತೆಯಾಗಿಲ್ಲ. ಆರೋಪಿಗೆ ಕೋರ್ಟ್ ಕಠಿಣ ಶಿಕ್ಷೆ ವಿಧಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia