Dailyhunt
ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಹಿಮಾಲಯದ ಅತ್ಯದ್ಭುತ ಫೋಟೋ

ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಹಿಮಾಲಯದ ಅತ್ಯದ್ಭುತ ಫೋಟೋ

ನಾಸಾದ ಗಗನಯಾತ್ರಿಯಾಗಿರುವ ಮಾರ್ಕ್ ವಂಡೆ ಹೀ ಎಂಬವರು ಬಾಹ್ಯಾಕಾಶ ನಿಲ್ದಾಣದಿಂದ ಹಿಮಾಲಯದ ಫೋಟೋಗಳನ್ನ ಕ್ಲಿಕ್ಕಿಸಿದ್ದು ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ. ಜೂನ್​ 2ರಂದು ಈ ಫೋಟೋಗಳನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಮಾರ್ಕ್​ ಹಿಮಾಲಯದ ಸೌಂದರ್ಯವನ್ನ ಹಾಡಿಹೊಗಳಿದ್ದಾರೆ. ಟ್ವೀಟಿಗರು ಈ ಫೋಟೋಗಳನ್ನ ನೋಡಿ ಫಿದಾ ಆಗಿದ್ದಾರೆ.

ಫೋಟೋದಲ್ಲಿ ಹಿಮದಿಂದ ಆವೃತವಾದ ಹಿಮಾಲಯದ ಪರ್ವತವು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಪರ್ವತಗಳ ಹಿಮ ರಾಶಿಯ ಮೇಲೆ ಸೂರ್ಯನ ಕಿರಣಗಳು ಬಿದ್ದಿದ್ದು ಹಿಮಾಲಯದ ಅಂದವನ್ನ ಇನ್ನಷ್ಟು ಹೆಚ್ಚಿಸಿದಂತಿದೆ. ಈ ಫೋಟೋ ನೋಡಿದ ಟ್ವೀಟಿಗರು ತರಹೇವಾರಿ ಕಮೆಂಟ್​ಗಳನ್ನ ಹಾಕುತ್ತಿದ್ದಾರೆ.

ಹಿಮಾಲಯ ತನ್ನದೇ ಆದ ರೀತಿಯಲ್ಲಿ ವ್ಯಕ್ತಿಯ ಆತ್ಮವನ್ನ ಸ್ಪರ್ಶಿಸುವ ಸಾಮರ್ಥ್ಯ ಹೊಂದಿದೆ ಎಂದು ಟ್ವೀಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

ಅಲ್ಲದೇ ಅನೇಕರು ಈ ಫೋಟೋವನ್ನ ನೋಡ್ತಿದ್ರೆ ನೈಟ್ರೋಜನ್​ ಐಸ್​ಕ್ರೀಂ ನೆನಪಾಗುತ್ತಿದೆ ಎಂದು ಹೇಳಿದ್ದಾರೆ.

Somewhere on a clear, bright day in the Himalayas. I can't get enough views like this. pic.twitter.com/1QNylAIqAF

- Mark T. Vande Hei (@Astro_Sabot)

Dailyhunt
Disclaimer: This content has not been generated, created or edited by Dailyhunt. Publisher: Kannada Dunia