Monday, 06 Sep, 8.42 pm ಕನ್ನಡದುನಿಯಾ

ರಾಷ್ಟೀಯ
ಬಯಲಾಯ್ತು ರೈಲಿನಲ್ಲಿ ಒಳ ಉಡುಪಿನಲ್ಲೇ ಅಡ್ಡಾಡಿದ್ದ ಶಾಸಕನ ಬಣ್ಣ

ಜೆಡಿ(ಯು) ಪಕ್ಷದ ಸಂಸದ ಅಜಯ್​ ಮಂಡಲ್​ ರೈಲಿನಲ್ಲಿ ಅಂಡರ್​ವೇರ್​ನಲ್ಲಿ ತಿರುಗಿದ ಸಂಸದ ಗೋಪಾಲ್ ಮಂಡಲ್​ ವರ್ತನೆ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಸೆಪ್ಟೆಂಬರ್​ 2ರಂದು ಪಾಟ್ನಾ - ದೆಹಲಿ ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್​​ನಲ್ಲಿ ಅವರು ಒಳ ಉಡುಪಿನಲ್ಲಿ ಓಡಾಡಿದ್ದರು.

ಈ ವಿಚಾರವಾಗಿ ಮಾತನಾಡಿದ ಅಜಯ್​ ಮಂಡಲ್​, ಗೋಪಾಲ್​ ಮಂಡಲ್​ ನಿಜಕ್ಕೂ ಒಬ್ಬ ಒಳ್ಳೆಯ ಮನುಷ್ಯ. ಆದರೆ ಮದ್ಯಪಾನ ಸೇವನೆ ಮಾಡಿದರೆ ಮಾತ್ರ ಅವರಿಗೆ ಕಂಟ್ರೋಲ್​ ಇರೋದೇ ಇಲ್ಲ ಎಂದು ಹೇಳಿದ್ದಾರೆ.

ಗೋಪಾಲ್​ ಮಂಡಲ್​ ನಮ್ಮದೇ ಪಕ್ಷದ ಶಾಸಕ. ಅವರು ಸಾಮಾನ್ಯವಾಗಿ ಯಾವುದೇ ತಪ್ಪನ್ನು ಮಾಡೋದಿಲ್ಲ. ಆದರೆ ಮದ್ಯಪಾನ ಸೇವನೆ ಮಾಡಿದರೆ ಮಾತ್ರ ಅವರಿಗೆ ನಿಯಂತ್ರಣವೇ ಇರೋದಿಲ್ಲ ಎಂದು ಅಜಯ್​ ಹೇಳಿದ್ದಾರೆ.

ನಾವೆಲ್ಲ ಜನ ಪ್ರತಿನಿಧಿಗಳು ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಸರಿಯಾಗಿ ವರ್ತಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಆದರೆ ಸೆಪ್ಟೆಂಬರ್​ 2ರಂದು ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್​ನಲ್ಲಿ ಗೋಪಾಲ್​​ ವರ್ತಿಸಿದ ರೀತಿ ಕ್ಷಮಿಸಲು ಸಾಧ್ಯವಿಲ್ಲ. ಇದು ನಿಜಕ್ಕೂ ಖಂಡನಾರ್ಹ ಎಂದು ಹೇಳಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top