Dailyhunt
ಬೆಳಗೆದ್ದು ನೀವು ಮಾಡುವ ಈ ಕೆಲಸ ಬದಲಿಸುತ್ತೆ ನಿಮ್ಮ ಅದೃಷ್ಟ

ಬೆಳಗೆದ್ದು ನೀವು ಮಾಡುವ ಈ ಕೆಲಸ ಬದಲಿಸುತ್ತೆ ನಿಮ್ಮ ಅದೃಷ್ಟ

ಅದೃಷ್ಟ ಕೈಕೊಟ್ಟಿದೆ. ಯಾವ ಕೆಲಸವೂ ಸುಸೂತ್ರವಾಗಿ ಆಗ್ತಾ ಇಲ್ಲ. ಈ ಮಾತನ್ನು ಅನೇಕರು ಹೇಳ್ತಿರುತ್ತಾರೆ. ಸದಾ ಅದೃಷ್ಟ ನಮ್ಮ ಬೆನ್ನಿಗಿರಬೇಕೆಂದಾದ್ರೆ ನಾವು ಚಿಕ್ಕ ಟಿಪ್ಸ್ ಪಾಲಿಸಬೇಕು. ಬೆಳಿಗ್ಗೆ ಎದ್ದ ತಕ್ಷಣ ಒಂದು ಹೆಸರನ್ನು ಕೈಮೇಲೆ ಬರೆದುಕೊಂಡ್ರೆ ಸಾಕು.

ನಿಮ್ಮ ಅದೃಷ್ಟ ಖುಲಾಯಿಸುತ್ತೆ.

ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಬಲಗೈ ಮೇಲೆ ನಿಮಗಿಷ್ಟವಾಗುವ ಮಂತ್ರವನ್ನು ಬರೆಯಿರಿ. ಅಂದ್ರೆ ಬೆಳಿಗ್ಗೆ ಎದ್ದ ತಕ್ಷಣ ನೀವು ನೆನೆಯುವ ದೇವರ ಮಂತ್ರವನ್ನು ಕೈ ಮೇಲೆ ಬರೆದುಕೊಳ್ಳಿ. ನೀವು ಕೃಷ್ಣನ ಭಕ್ತರಾಗಿದ್ದರೆ ಕೃಷ್ಣನ ಮಂತ್ರ, ರಾಮನ ಭಕ್ತರಾಗಿದ್ದರೆ ರಾಮನ ಮಂತ್ರವನ್ನು ಬರೆಯಿರಿ.

ಸೀರೆಯುಟ್ಟು ಗರ್ಬಾ ನೃತ್ಯ ಮಾಡುವ ಪುರುಷರು.! ಇದರ ಹಿಂದಿದೆ ಒಂದು ಮಹತ್ವದ ಕಾರಣ

ಮಂತ್ರವನ್ನು ಕೈ ಮೇಲೆ ಬರೆಯಲು ಪೆನ್ನು ಅಥವಾ ಪೆನ್ಸಿಲ್ ಬಳಸಬೇಡಿ. ನಿಮ್ಮ ಕೈ ಬೆರಳುಗಳ ಸಹಾಯದಿಂದಲೇ ಸಾಂಪ್ರದಾಯಿಕ ರೂಪದಲ್ಲಿ ಮಂತ್ರವನ್ನು ಬರೆಯಿರಿ.

ಶಾಸ್ತ್ರಗಳ ಪ್ರಕಾರ ನಮ್ಮ ಕೈನಲ್ಲಿಯೇ ನಮ್ಮ ಅದೃಷ್ಟ ಅಡಗಿರುತ್ತದೆ. ಬೆಳ್ಳಂಬೆಳಿಗ್ಗೆ ಈ ರೇಖೆಗಳ ಮೇಲೆ ನಿಮ್ಮಿಷ್ಟದ ದೇವರ ಮಂತ್ರವನ್ನು ಬರೆಯುವುದರಿಂದ ಭಾಗ್ಯದ ಬಾಗಿಲು ತೆರೆಯುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia