ಕನ್ನಡದುನಿಯಾ
1.6M Followersಬೆಂಗಳೂರು: ಇಂದು ಚಂದ್ರದರ್ಶನ ವಾಗದ ಹಿನ್ನೆಲೆಯಲ್ಲಿ ಸೋಮವಾರದ ಬದಲು ಮಂಗಳವಾರ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಚಂದ್ರದರ್ಶನವಾಗದ ಕಾರಣ ಮಂಗಳವಾರ ರಂಜಾನ್ ಆಚರಿಸಲಾಗುವುದು ಎನ್ನಲಾಗಿದೆ.
ಮೇ 3 ರಂದು ರಂಜಾನ್ ನಿಗದಿಯಾಗಿತ್ತು. ರಾಜ್ಯದಲ್ಲಿ ಮೇ 2 ರಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ. ಆದರೆ, ಚಂದ್ರದರ್ಶನವಾಗದ ಕಾರಣ ಸೋಮವಾರದ ಬದಲು ಮಂಗಳವಾರ ರಂಜಾನ್ ಆಚರಿಸಲಾಗುವುದು ಎನ್ನಲಾಗಿದೆ.
ಕೇರಳ ಮತ್ತು ಕರಾವಳಿ ಭಾಗದಲ್ಲಿಯೂ ಇಂದು ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಭಾರತದಾದ್ಯಂತ ಮಂಗಳವಾರವೇ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಲಾಗುವುದು.
Disclaimer
This story is auto-aggregated by a computer program and has not been created or edited by Dailyhunt Publisher: Kannada Dunia