ಕನ್ನಡದುನಿಯಾ

1.6M Followers

BIG NEWS: ಡಬ್ಬಲ್‌ ʼಮಾಸ್ಕ್‌ʼ ಧಾರಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

10 May 2021.3:58 PM

ಸಂಪೂರ್ಣ ದೇಶವೇ ಕೊರೊನಾ 2 ಅಲೆಯ ಹೋರಾಟದಲ್ಲಿದೆ. ಸೋಂಕಿನ ಸದ್ಯದ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಅನೇಕ ತಜ್ಞರು ಎರಡು ಮಾಸ್ಕ್​​ಗಳನ್ನ ಧರಿಸುವಂತೆ ಸಲಹೆಯನ್ನ ನೀಡ್ತಿದ್ದಾರೆ.

ಆದರೆ ಕೇಂದ್ರ ಸರ್ಕಾರ ಡಬಲ್​ ಮಾಸ್ಕ್​ ಧರಿಸುವ ವೇಳೆಯಲ್ಲಿ ಜನತೆ ಏನನ್ನ ಮಾಡಬೇಕು ಹಾಗೂ ಯಾವುದನ್ನ ಮಾಡಬಾರದು ಅನ್ನೋದರ ಕುರಿತು ಮಾಹಿತಿಯನ್ನ ರಿಲೀಸ್​ ಮಾಡಿದೆ.

ಡಬಲ್​ ಮಾಸ್ಕ್​​ ಹಾಕುವವರು ಒಂದು ಸರ್ಜಿಕಲ್​ ಮಾಸ್ಕ್​ ಹಾಗೂ 2-3 ಪದರಗಳುಳ್ಳ ಬಟ್ಟೆಯ ಮಾಸ್ಕ್​ನ್ನು ಹೊಂದಿರಬೇಕು.

ಮೂಗಿನ ಬಳಿಯಲ್ಲಿ ಗಟ್ಟಿಯಲ್ಲಿ ಪ್ರೆಸ್​ ಮಾಡಿಕೊಳ್ಳುವ ವ್ಯವಸ್ಥೆ ಇರಬೇಕು.

ಉಸಿರಾಟಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

ಬಟ್ಟೆ ಮಾಸ್ಕ್​ನ್ನು ಬಳಸಿದ ಬಳಿಕ ತೊಳೆಯಬೇಕು.

ಒಂದೇ ಬಗೆಯ ಮಾಸ್ಕ್​ಗಳಿಂದ ಡಬಲ್​ ಮಾಸ್ಕ್​ ಮಾಡಿಕೊಳ್ಳಬೇಡಿ.

ಒಂದೇ ಮಾಸ್ಕ್​ನ್ನು ನಿರಂತರ ಎರಡು ದಿನಗಳ ಕಾಲ ಬಳಕೆ ಮಾಡಬೇಡಿ.

ಸರಿಯಾದ ಅಳತೆಯ ಡಬಲ್​ ಮಾಸ್ಕ್​ಗಳು ಕೊರೊನಾ ವೈರಾಣುಗಳನ್ನ ದೇಹದಿಂದ ಇನ್ನಷ್ಟು ದೂರ ಇಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ದೇಶದಲ್ಲಿ ಸದ್ಯ ವೈದ್ಯಕೀಯ ಸೌಲಭ್ಯಗಳ ಅಭಾವವೂ ಕಂಡು ಬರ್ತಿರೋ ಈ ಸಂದರ್ಭದಲ್ಲಿ ಮಾಸ್ಕ್​ಗಳ ಸಹಾಯದಿಂದ ಸೋಂಕಿನಿಂದ ದೂರ ಇರೋದೇ ಒಳ್ಳೆಯದಾಗಿದೆ.

#Unite2FightCorona

The Dos and Dont's while #DoubleMasking.Take a look👇#PIBKochi @COVIDNewsByMIB @PIB_India @KirenRijiju @BSF_India @CRPF_sector @cpmgkerala @crpfindia @GMSRailway pic.twitter.com/hH8nY9Og38

- PIB in KERALA (@PIBTvpm)

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags