Dailyhunt Logo
  • Light mode
    Follow system
    Dark mode
    • Play Story
    • App Story
BIG NEWS: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಇಂದಿಗೆ 1 ತಿಂಗಳು: 30 ದಿನಗಳಲ್ಲಿ ಅವರು ಕೈಗೊಂಡ ಮಹತ್ವದ ತೀರ್ಮಾನಗಳು

BIG NEWS: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಇಂದಿಗೆ 1 ತಿಂಗಳು: 30 ದಿನಗಳಲ್ಲಿ ಅವರು ಕೈಗೊಂಡ ಮಹತ್ವದ ತೀರ್ಮಾನಗಳು

ಬೆಂಗಳೂರು: ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ ಒಂದು ತಿಂಗಳು. ಈ 30 ದಿನಗಳಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಅವರು ಕೈಗೊಂಡ ಮಹತ್ವದ ತೀರ್ಮಾನಗಳ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಪಟ್ಟಿ.

• ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
• ರಾಜ್ಯದ ಎಲ್ಲಾ ಪಂಚಾಯಿತಿ, ವಾರ್ಡ್ ಗಳಲ್ಲಿ ಭಾರತ ಜೋಡೋ ಯುವಕರ ಸಂಘ ಸ್ಥಾಪನೆ. ತಲಾ 10 ಲಕ್ಷ ರೂ. ನೀಡುವ ನಿರ್ಣಯ.
• 2500 ಅಡಿವರೆಗಿನ ನೂತನ ವಸತಿ ಕಟ್ಟಡಗಳ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಒಸಿ ವಿನಾಯಿತಿ
• ರಾಜ್ಯದೆಲ್ಲೆಡೆ 'ಬಿ' ಯಿಂದ 'ಎ' ಖಾತಾ ಪರಿವರ್ತನೆ.
• ಬೆಂಗಳೂರಿನ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು 2 ಸಾವಿರ ಕೋಟಿ ರೂ. ಯೋಜನೆ.
• ಖಾಸಗಿ ವಲಯದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲು ತೀರ್ಮಾನ.
• 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ 6 ತಿಂಗಳ ಗಡವು.
• ಸಾರ್ವಜನಿಕರ ಕುಂದುಕೋರತೆ, ಅಹವಾಲು ಆಲಿಸಲು ‘ಪ್ರಜಾಸೇವೆ’ ಎಂಬ ಪ್ರತ್ಯೇಕ ಸಚಿವಾಲಯ.
• ಶಾಸಕರು, ಮಂತ್ರಿಗಳ ಒತ್ತಡಕ್ಕೆ ಮಣಿಯದೇ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ.
• ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜ್ಯದವರಿಗೆ ಮಾತ್ರ ಸಿಗಬೇಕು ಹಾಗೂ ಸೋರಿಕೆ ತಪ್ಪಿಸಲು ಕ್ರಮ.
• ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಕಣಕ್ಕಿಳಿಸಿ ಗೆಲುವು.
• ರೌಡಿಗಳ ನಿಗ್ರಹಕ್ಕೆ ಜಿಲ್ಲೆಗೊಂದು ಪಡೆ ರಚನೆಗೆ ಸೂಚನೆ.
• ಕೇಂದ್ರದ ನೀತಿ ಆಯೋಗ ಸಭೆಯಲ್ಲಿ ಭಾಗಿ ಕರ್ನಾಟಕದ ಬೇಡಿಕೆಗಳ ಪ್ರಸ್ತಾಪ.
• ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ಅಮಿತ್ ಶಾ, ಸಿ.ಆರ್ ಪಾಟೀಲ್, ನಿರ್ಮಲಾ ಸೀತರಾಮನ್, ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ ಯೋಜನೆಗಳು, ಬೆಂಗಳೂರಿನ ಮೆಟ್ರೋ, RRTS ರೈಲು ಹಾಗೂ ಪೋಲೀಸ್ ಇಲಾಖೆಗಳ ಯೋಜನೆಗಳು ಹಾಗೂ ವಿಶೇಷ ಅನುದಾನಗಳ ಬಗ್ಗೆ ಚರ್ಚೆ.
• ದೆಹಲಿಯಲ್ಲಿರುವ ರಾಜ್ಯದ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಸಭೆ ಮಾಡಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಲು ಕರೆ.
• ಕಾಲೇಜು ಚುನಾವಣೆಗಳನ್ನು ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸಲು ಚಿಂತನೆ‌.
• ಎಲ್ಲಾ ತಾಲ್ಲೂಕುಗಳಲ್ಲಿ ರಿಂಗ್ ರಸ್ತೆ ಗ್ರಿಡ್ ಗುರುತಿಸಲು ನಿರ್ದೇಶನ.
• ಭ್ರಷ್ಟಾಚಾರ ವಿರುದ್ಧ ದೂರು ನೀಡಲು ದೂರವಾಣಿ ಸಂಖ್ಯೆ.
• ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 10 ಗಂಟೆಗೆ ಜಿಪಿಎಸ್ ತಂತ್ರಾಂಶದ ಸಿಬ್ಬಂದಿ ಹಾಜರಾತಿಗೆ ಸೂಚನೆ.
• ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ನಿರ್ದೇಶನ.
• ನೂತನ ಸಿಎಸ್‌ಆರ್ ನೀತಿ ತರಲು ಅಧಿಕಾರಿಗಳಿಗೆ ಸೂಚನೆ.
• ಬರ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಸಿದ್ಧತೆಗೆ ಅಧಿಕಾರಿಗಳ ಜೊತೆ ಸಭೆ.
• ಮಾವು ಬೆಳೆಗಾರರಿಗೆ ಕಳೆದ ವರ್ಷದಂತೆ ಪ್ರೋತ್ಸಾಹ ಧನ ಮುಂದುವರಿಸಲು ತೀರ್ಮಾನ.
• ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಗೆ ನಿರ್ದೇಶನ.
• ಕರಾವಳಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ವಿವಿಧ ಕ್ರಮ.
• ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ತೀರ್ಮಾನ.
• ಕರ್ನಾಟಕ ರಾಜ್ಯದ ಹಿತ ಕಾಯಲು ದೆಹಲಿಯಲ್ಲಿ ನಿವೃತ್ತ ಐಎಎಸ್,ಐಪಿಎಸ್ ಅಧಿಕಾರಿಗಳ ತಂಡ ರಚನೆಗೆ ನಿರ್ಧಾರ.
• ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳ ನಿರ್ವಹಣೆ ಮತ್ತು ತ್ವರಿತ ಇತ್ಯರ್ಥಕ್ಕೆ ವಕೀಲರ ತಂಡ ಸದೃಢಗೊಳಿಸಲು ತೀರ್ಮಾನ.
• ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆಗೆ ನಿರ್ಧಾರ.
• ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕಗಳ ಸಂರಕ್ಷಣೆಗೆ 5 ಕೋಟಿ ರೂ ಹಾಗೂ 2 ಎಕರೆ ಜಾಗ ನೀಡಲು ತೀರ್ಮಾನ.
• ತುಂಗಭದ್ರಾ ಅಣೆಕಟ್ಟು ನೂತನವಾಗಿ ಅಳವಡಿಸಲಾಗಿರುವ ಸ್ಪಿಲ್ ಗೇಟ್ ಗಳ ಉದ್ಘಾಟನೆ.
• ತುಂಗಾಭದ್ರ ಪಾತ್ರದ ರೈತರ ರಕ್ಷಣೆಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್ ಪಾಟೀಲ್ ನೇತೃತ್ವದಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಒಗ್ಗಟ್ಟಾಗಿ ಸೇರಿ ಒಮ್ಮತದ ತೀರ್ಮಾನ.
• ಅಣೆಕಟ್ಟಿನಲ್ಲಿ ಹೂಳು ತೆಗೆಯಲು ಕೇಂದ್ರದಿಂದ ಯೋಜನೆ.
• ಬಡವರ ವಸತಿ ಯೋಜನೆಗಳ ಮಂದಗತಿಗೆ ಅಸಮಾಧಾನ, ಆದಷ್ಟು ಬೇಗ ವಸತಿ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ.
• ಬಡವರಿಗೆ ನಿವೇಶನ ಬದಲು ಮನೆ ಕಟ್ಟಿಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ.
• ಕೆಂಪೇಗೌಡ ಬಡಾವಣೆಯಲ್ಲಿ 10 ಪಥಗಳ ಎಸ್.ಎಂ ಕೃಷ್ಣ ರಸ್ತೆ ಉದ್ಘಾಟನೆ.
• ತೆರಿಗೆ ವಂಚನೆ ತಡೆಯುವಂತೆ ಅಧಿಕಾರಿಗಳಿಗೆ ಸೂಚನೆ.
• ರಾಜಕೀಯ ವ್ಯವಹಾರಗಳ ಸಮಿತಿ ರಚನೆಗೆ ತೀರ್ಮಾನ.
• ಬಂಡೀಪುರ, ನಾಗರಹೊಳೆ ಹುಲಿ ಸಫಾರಿ ಪುನರಾರಂಭ.
• ಹೆಬ್ಬಾಳ ಬಳಿ ಸಣ್ಣ ಸುರಂಗ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ
• ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಬಿಡಿಎ ವತಿಯಿಂದ ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ, ಗಿನ್ನೀಸ್ ದಾಖಲೆ ನಿರ್ಮಾಣ.
• ಸಾರ್ವಜನಿಕ ಯೋಜನೆಗಳಿಗೆ ಭೂಮಿ ಕೊಡುವ ರೈತರು, ಭೂಮಾಲೀಕರಿಗೆ ಗೌರವ ನೀಡಲು ವಾಲ್ ಆಫ್ ಗ್ರ್ಯಾಟಿಟ್ಯೂಡ್ ನಿರ್ಮಾಣಕ್ಕೆ ನಿರ್ಧಾರ.
• 2028ಕ್ಕೆ ನಶೆ ಮುಕ್ತ ಕರ್ನಾಟಕ ನಿರ್ಮಾಣದ ಗುರಿ.
• ಅಮಲು ಬೆರೆಸುವ ಪಾನ್ ಮಸಾಲ, ಗುಟ್ಕಾಗಳ ನಿಷೇಧಿಸುವ ಎಚ್ಚರಿಕೆ.
• ಡ್ರಗ್ಸ್ ಜಾಲ ನಿಗ್ರಹಕ್ಕೆ ಸುಳಿವು ನೀಡಿದವರಿಗೆ ಬಹುಮಾನ ನೀಡಲು ತೀರ್ಮಾನ.
• ಖಾಸಗೀಕರಣ ವಿರೋಧಿಸುತ್ತಿದ್ದ ಎಸ್ಕಾಂ ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯ.
• ಹಾಸನದ ಐಐಟಿಗೆ ಭೂಸ್ವಾಧೀನದಿಂದ ಸರಿಯಾದ ಪರಿಹಾರ ಸಿಗದೆ ನೊಂದ ಹಾಸನದ ರೈತರಿಗೆ 2013ರ ಕೋರ್ಟ್ ಆದೇಶ ಅನ್ವಯ ಪರಿಹಾರ ನೀಡುವ ಭರವಸೆ.
• ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದ ಜನರ ಮತದಾನದ ಹಕ್ಕು ರಕ್ಷಣೆಗೆ ನಿವಾಸ ದೃಢೀಕರಣ ಪತ್ರ ಸೇರಿದಂತೆ ಸರ್ಕಾರದಿಂದ ಅಗತ್ಯ ನೆರವು.
• ಕೇಂದ್ರ ಅರಣ್ಯ ಇಲಾಖೆಗಳಲ್ಲಿ ಅರಣ್ಯ ಅನುಮತಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಜು.15ರ ಒಳಗೆ ಇತ್ಯರ್ಥಕ್ಕೆ ಸೂಚನೆ.
• ಗಣಿಗಾರಿಕೆ ಸೇರಿ ನಾನಾ ಚಟುವಟಿಕೆಗಳಿಗೆ ಸರ್ಕಾರಿ ಜಾಗ ಪಡೆದು ವರ್ಷಗಳ ಕಾಲ ಚಟುವಟಿಕೆ ಆರಂಭಿಸದಿದ್ದರೆ ಆ ಭೂಮಿ ಹಿಂಪಡೆಯಲು ಸೂಚನೆ.
• ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಭೂಕಂಪನ ಅಧ್ಯಯನಕ್ಕೆ ಮಣ್ಣು ಪರೀಕ್ಷೆಗೆ ಹಾಗೂ ಸಮೀಕ್ಷೆಗೆ ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮತಿ ನೀಡಿದ್ದು, ಇದರ ಮುಂದುವರಿದ ಭಾಗವಾಗಿ ಕೇಂದ್ರ ವನ್ಯಜೀವಿ ಮಂಡಳಿಗೆ ಅನುಮತಿ ಕೋರಿ ಶಿಫಾರಸ್ಸು.

Dailyhunt
Disclaimer: This content has not been generated, created or edited by Dailyhunt. Publisher: Kannada Dunia