ಬೆಂಗಳೂರು: ಇಎಸ್‌ಐಸಿ ಮೆಡಿಕಲ್ ವಿದ್ಯಾರ್ಥಿಗಳಿಗೆ ಒಂದು ವರ್ಷ ಕಡ್ಡಾಯ ಸೇವೆ ನಿಯಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಇಎಸ್‌ಐಸಿ ಮೆಡಿಕಲ್ ಕಾಲೇಜು ಸಬ್ಸಿಡಿಯಲ್ಲಿ ಶಿಕ್ಷಣ ನೀಡುತ್ತಿದೆ. ಶಿಕ್ಷಣದ ನಂತರ ಒಂದು ವರ್ಷದ ಸೇವೆ ನಿರೀಕ್ಷಿಸುತ್ತಿದೆ. ಒಂದು ವರ್ಷ ಕಡ್ಡಾಯ ಸೇವೆ ನೀಡುವುದಾಗಿ ವಿದ್ಯಾರ್ಥಿಗಳು ಬಾಂಡ್ ನೀಡಿದ್ದಾರೆ.
ಕಡ್ಡಾಯ ಸೇವೆ ಮಾಡಲಾಗದವರು 5 ಲಕ್ಷ ರೂ. ನೀಡಲು ಅವಕಾಶವಿದೆ.
ಬಾಂಡ್ ಪಡೆಯುವುದರಿಂದ ವಿದ್ಯಾರ್ಥಿಗಳ ಹಕ್ಕಿನ ಹರಣವಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.

