Thursday, 29 Jul, 11.16 am ಕನ್ನಡದುನಿಯಾ

Breaking Karnataka
BIG NEWS: ಮಂತ್ರಿ ಸ್ಥಾನಕ್ಕಾಗಿ ಲಾಬಿ; ಹೈಕಮಾಂಡ್ ಭೇಟಿಗೆ ದೆಹಲಿಗೆ ದೌಡಾಯಿಸಿದ ಹಿರಿಯ ಸಚಿವರು; ಕುತೂಹಲ ಮೂಡಿಸಿದ ಉಮೇಶ್ ಕತ್ತಿ ನಡೆ

ನವದೆಹಲಿ: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಹಲವು ಹಿರಿಯ ನಾಯಕರಿಗೆ ಸಚಿವ ಸ್ಥಾನ ಕೈತಪ್ಪುವ ಭೀತಿ ಎದುರಾಗಿದ್ದು, ದೆಹಲಿಗೆ ದೌಡಾಯಿಸಿದ್ದಾರೆ. ವರಿಷ್ಠರ ಮೂಲಕ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ಉಮೇಶ್ ಕತ್ತಿ ಹೈಕಮಾಂಡ್ ಭೇಟಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನವದೆಹಲಿಯಲ್ಲಿ ಮಾತನಾಡಿದ ಉಮೇಶ್ ಕತ್ತಿ, ಸಿಎಂ ಬೊಮ್ಮಾಯಿ ನನ್ನನ್ನು ಬಿಟ್ಟು ಸಂಪುಟ ರಚನೆ ಮಾಡಲ್ಲ ಎಂಬ ನಂಬಿಕೆಯಿದೆ. ನಾನು ಈಗಗಾಲೆ 4 ಭಾರಿ ಮಂತ್ರಿಯಾದ ಅನುಭವವಿದೆ. ನನಗೂ ಸಚಿವ ಸ್ಥಾನ ನೀಡುತ್ತಾರೆ. ಅಖಂಡ ಕರ್ನಾಟಕದ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದರು.

ಏರ್ಟೆಲ್ ಗ್ರಾಹಕರಿಗೆ ಶಾಕ್, ಉಳಿದ ಕಂಪನಿ ಗ್ರಾಹಕರಿಗೂ ತಟ್ಟಲಿದೆ ಬಿಸಿ.?

ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ಬಂದಿದ್ದೇನೆ. ಅಮಿತ್ ಶಾ, ನಡ್ಡಾ, ಬಿ.ಎಲ್.ಸಂತೋಷ್ ಭೇಟಿಗೆ ಸಮಯ ಕೇಳಿದ್ದು, ಅವಕಾಶ ಸಿಕ್ಕರೆ ವರಿಷ್ಠರ ಭೇಟಿಯಾಗಿ ಮಾತನಾಡುತ್ತೇನೆ. ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಕ್ಕರೆ ಸಂತೋಷದಿಂದ ಕಾರ್ಯ ನಿರ್ವಹಿಸುತ್ತೇನೆ. ಒಂದು ವೇಳೆ ಸಚಿವ ಸ್ಥಾನ ಸಿಗದೆ ಹೋದರೆ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಈ ನಡುವೆ ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಕೂಡ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top