Thursday, 16 Sep, 10.10 am ಕನ್ನಡದುನಿಯಾ

ಹೋಮ್
BIG NEWS: ಪಟಾಕಿಗೆ ಸಂಪೂರ್ಣ ನಿಷೇಧ ಹೇರಿದ ದೆಹಲಿ ಸರ್ಕಾರ, ದೀಪಾವಳಿ ದೂರವಿರುವಾಗಲೇ ಮಹತ್ವದ ನಿರ್ಧಾರ

ನವದೆಹಲಿ: ಈ ಸಲವೂ ದೆಹಲಿಯಲ್ಲಿ ದೀಪಾವಳಿ ಪಟಾಕಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕಳೆದ ಮೂರು ವರ್ಷಗಳಿಂದ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚಲು ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ ಈ ಬಾರಿಯೂ ದೆಹಲಿಯಲ್ಲಿ ದೀಪಾವಳಿ ಪಟಾಕಿ ಸಂಗ್ರಹಣೆ, ಮಾರಾಟ, ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ತೀವ್ರ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿ ಪಟಾಕಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.

ತಡವಾಗಿ ಆದೇಶ ಹೊರಡಿಸಿದ್ದರಿಂದ ಮಾರಾಟಗಾರರಿಗೆ ಕಳೆದ ವರ್ಷಗಳಲ್ಲಿ ತೊಂದರೆಯಾಗಿತ್ತು. ಇದನ್ನು ಮನಗಂಡು ಈ ವರ್ಷ ಹಬ್ಬಕ್ಕೆ ಇನ್ನೂ ದೂರ ಇರುವಾಗಲೇ ಮಾರಾಟಗಾರರಿಗೆ ಪಟಾಕಿ ಸಂಗ್ರಹಿಸಿದಂತೆ ಸೂಚನೆ ನೀಡಲಾಗಿದೆ. ಹಸಿರು ನ್ಯಾಯಾಧಿಕರಣ ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಕಳೆದ ವರ್ಷ ಪಟಾಕಿ ಬ್ಯಾನ್ ಮಾಡಿತ್ತು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top