Dailyhunt Logo
  • Light mode
    Follow system
    Dark mode
    • Play Story
    • App Story
Big News: ಶಿಕ್ಷಕರ, ಮಕ್ಕಳ ಮುಖ ಚಹರೆ ಹಾಜರಾತಿ: ಷರತ್ತುಗಳು

Big News: ಶಿಕ್ಷಕರ, ಮಕ್ಕಳ ಮುಖ ಚಹರೆ ಹಾಜರಾತಿ: ಷರತ್ತುಗಳು

ರ್ನಾಟಕ ಸರ್ಕಾರದ ಬಜೆಟ್ ಘೋಷಣೆ ಕಂಡಿಕೆ 112ರಂತೆ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಜರಾತಿಯನ್ನು AI-Based Student Facial Attendance Monitoring System ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಿಸುವ 'ನಿರಂತರ' ಕಾರ್ಯಕ್ರಮವನ್ನು Centre for E-Governance ಮೂಲಕ ಅನುಷ್ಠಾನಗೊಳಿಸುವ ಕುರಿತು ಆದೇಶವನ್ನು ಹೊರಡಿಸಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಶುಭಮಂಗಳ ಆರ್.ವಿ. ವಿಶೇಷಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ (ಯೋಜನೆ) ಶಾಲಾ ಶಿಕ್ಷಣ ಮತ್ತು ಸಾಕ್ಷರಾ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ.

ಆದೇಶದಲ್ಲಿ 'ನಿರಂತರ' ಕಾರ್ಯಕ್ರಮದಡಿ Face Recognition ತಂತ್ರಜ್ಞಾನದ ಮೂಲಕ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳ ಹಾಜರಾತಿಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು 2025-26ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸುವ ಸಂಬಂಧ ದಿನಾಂಕ: 21.06.2025 ರಂದು ಹೊರಡಿಸಿದ್ದ ಸರ್ಕಾರದ ಆದೇಶವನ್ನು ಹಿಂಪಡೆಯಲಾಗಿದೆ.

ಈ ಸಂಬಂಧ 2025-26ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಆಯವ್ಯಯ ಘೋಷಣೆ – ಕಂಡಿಕೆ 112ರಂತೆ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ – ಕಾಲೇಜು ವಿದ್ಯಾರ್ಥಿಗಳ ಹಾಜರಾತಿಯನ್ನು AI-Based Student Facial Attendance Monitoring System ಮೊಬೈಲ್ ಅಪ್ಲಿಕೇಷನ್‌ ಮೂಲಕ ದಾಖಲಿಸುವ "ನಿರಂತರ ಕಾರ್ಯಕ್ರಮವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಯ ಇ-ಆಡಳಿತ ಕೇಂದ್ರದ ಮೂಲಕ ಅಭಿವೃದ್ಧಿಪಡಿಸಿ, 2026-27ನೇ ಶೈಕ್ಷಣಿಕ ಸಾಲಿನ ಪ್ರಾರಂಭದಿಂದಲೇ ಕಡ್ಡಾಯವಾಗಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರ್ಗಿ ಹಾಗೂ ಧಾರವಾಡ ಮತ್ತು ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರಿಗೆ ಅನುಮತಿಸಿ ಆದೇಶಿಸಿದೆ ಎಂದು ಹೇಳಿದೆ.

ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರ್ಗಿ ಹಾಗೂ ಧಾರವಾಡ ಮತ್ತು ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಇವರು ಪಾಲಿಸಬೇಕಾದ ಷರತ್ತುಗಳು ಮತ್ತು ನಿಬಂಧನೆಗಳು

* ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರ್ಗಿ ಹಾಗೂ ಧಾರವಾಡ ಮತ್ತು ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಇವರು ಸದರಿ ಯೋಜನೆಯ ಅನುಷ್ಠಾನಾಧಿಕಾರಿಗಳಾಗಿ ಕಾರ್ಯನಿರ್ವಹಿಸತಕ್ಕದ್ದು.

* AI-Based Student Facial Attendance Monitoring System 3, Å HA OD 2 kn ಶಾಲಾ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಎರಡು ಇಲಾಖೆಗಳಲ್ಲಿನ 2026-27ನೇ ಶೈಕ್ಷಣಿಕ ಸಾಲಿನ ಪ್ರಾರಂಭದಿಂದಲೇ ಸರ್ಕಾರಿ ಹಾಗೂ ಅನುದಾನಿತ ಶಾಲಾ/ ಕಾಲೇಜು ವಿದ್ಯಾರ್ಥಿಗಳಿಗೆ ಅನುಷ್ಠಾನಗೊಳಿಸತಕ್ಕದು.

* ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರ್ಗಿ ಹಾಗೂ ಧಾರವಾಡ ಮತ್ತು ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, CeG ಹಾಗೂ ಯೋಜನಾ ನಿರ್ದೇಶಕರು, Al-ML CeG ರವರೊಂದಿಗೆ ಸಮನ್ವಯಿಸಿ, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮವಹಿಸತಕ್ಕದ್ದು.

* AI-Based Student Facial Attendance Monitoring System ಮೊಬೈಲ್ ಅಪ್ಲಿಕೇಷನ್ ಅನ್ನು ಮೇ- 2026ರ ಒಳಗೆ ಅಭಿವೃದ್ಧಿಪಡಿಸಿ, ಅನುಷ್ಠಾನಗೊಳಿಸಲು ಇ-ಆಡಳಿತ ಕೇಂದ್ರ ಇವರು ಅಗತ್ಯ ಕ್ರಮವಹಿಸತಕ್ಕದ್ದು.

* ವಿದ್ಯಾರ್ಥಿಗಳ ಹಾಜರಾತಿಯನ್ನು ಎಲ್ಲಾ ರೀತಿಯ ಪರಿಸರಗಳಲ್ಲಿ (Low-Light Conditions) ಹಾಗೂ ಯಾವುದೇ ವಿದ್ಯಾರ್ಥಿಯ ಹಾಜರಾತಿಯು ತಪ್ಪದಂತೆ ಸೆರೆಹಿಡಿಯಲು ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ಇ-ಆಡಳಿತ ಕೇಂದ್ರ ಕ್ರಮವಹಿಸತಕ್ಕದ್ದು.

* ವಿದ್ಯಾರ್ಥಿಗಳ ನೋಂದಣಿಯನ್ನು SATS ತಂತ್ರಾಂಶದೊಂದಿಗೆ ಕಡ್ಡಾಯವಾಗಿ ದೃಢೀಕರಣ ಮಾಡತಕ್ಕದ್ದು, ಇದಕ್ಕೆ ಅವಶ್ಯಕವಿರುವ ದತ್ತಾಂಶವನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಇ-ಆಡಳಿತ ಕೇಂದ್ರಕ್ಕೆ ಒದಗಿಸತಕ್ಕದು.

* ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜು ವಿದ್ಯಾರ್ಥಿಗಳ AI-Based Student Facial Attendance Monitoring System 3.er ಅಪ್ಲಿಕೇಷನ್ ಮೂಲಕ ನೊಂದಣಿಯಾಗಿ, ಹಾಜರಾತಿಯನ್ನು ಸೆರೆಹಿಡಿಯಲು ಸಂಬಂಧಿಸಿದ ಸಂಸ್ಥೆಯ ಮುಖ್ಯಸ್ಥರು ನಿಯಮಾನುಸಾರ ಕ್ರಮವಹಿಸತಕ್ಕದ್ದು.

* ನಿರಂತರ ಕಾರ್ಯಕ್ರಮದ ಅನುಷ್ಠಾನ ಸಂಬಂಧ ಜಿಲ್ಲಾ, ತಾಲ್ಲೂಕು ಹಂತದ ಮೇಲುಸ್ತುವಾರಿಯನ್ನು ಜಿಲ್ಲಾ ಉಪನಿರ್ದೇಶಕರು (ಅಭಿವೃದ್ಧಿ, ಆಡಳಿತ ಮತ್ತು ಪದವಿ ಪೂರ್ವ) ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ರವರ ಮೂಲಕ ನಿರ್ವಹಿಸತಕ್ಕದ್ದು. ಇದಕ್ಕಾಗಿ ವಿವರವಾದ ಸುತ್ತೋಲೆಯನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಹಾಗೂ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರು ಹೊರಡಿಸತಕ್ಕದ್ದು.

* "ನಿರಂತರ" ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಜಿಲ್ಲಾ ಹಾಗೂ ತಾಲ್ಲೂಕು ಹಂತದಲ್ಲಿ ಪ್ರಾಥಮಿಕ / ಪ್ರೌಢಶಾಲೆಗಳ / ಪದವಿಪೂರ್ವ ಕಾಲೇಜುಗಳ ಶಿಕ್ಷಕರು / ಉಪನ್ಯಾಸಕರು /ಮುಖ್ಯ ಶಿಕ್ಷಕರು / ಪ್ರಾಂಶುಪಾಲರು, BRP, CRP ಹಾಗೂ ECO ರವರಿಗೆ ಅಗತ್ಯ ತರಬೇತಿಯನ್ನು ಆನ್‌ಲೈನ್ ಮೂಲಕ ಒದಗಿಸಲು ಅನುಷ್ಠಾನಾಧಿಕಾರಿಗಳು ಅಗತ್ಯ ಕ್ರಮವಹಿಸತಕ್ಕದ್ದು. ಇದಕ್ಕೆ ಇ-ಆಡಳಿತ ಕೇಂದ್ರ ಎಲ್ಲಾ ರೀತಿಯ ಸಹಕಾರ ನೀಡತಕ್ಕದು. ಸದರಿ ತರಬೇತಿಯು 2026ನೇ ಸಾಲಿನ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿಯೇ ಮುಕ್ತಾಯಗೊಳಿಸತಕ್ಕದ್ದು.

* ಸದರಿ ಕಾರ್ಯಕ್ರಮಕ್ಕೆ ಹಾಗೂ ಯೋಜನಾ ಅನುಷ್ಠಾನದಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮವಹಿಸತಕ್ಕದ್ದು.

* ಸದರಿ ಕಾರ್ಯಕ್ರಮದಲ್ಲಿ ದೈನಂದಿನ ಮಕ್ಕಳ ಹಾಜರಾತಿಯನ್ನು SATS ತಂತ್ರಾಂಶದೊಂದಿಗೆ ಸಂಯೋಜಿಸಿ, SATS ತಂತ್ರಾಂಶದಲ್ಲಿ ಪ್ರದರ್ಶನಗೊಳ್ಳುವಂತೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಹಾಗೂ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರು ಅಗತ್ಯ ಕ್ರಮವಹಿಸತಕ್ಕದ್ದು.

* ಸಮಗ್ರ ಹಾಜರಾತಿ ವರದಿಗಳನ್ನು ಬಳಸಿ ಹಾಜರಾತಿ ಕಡಿಮೆಯಿರುವ ಶಾಲಾ/ ಕಾಲೇಜು ಅಥವಾ ವಲಯಗಳನ್ನು ಗುರುತಿಸಲು ಹಾಗೂ ಶೈಕ್ಷಣಿಕ ವಿಶ್ಲೇಷಣೆಯನ್ನು ಕೈಗೊಂಡು ಶೈಕ್ಷಣಿಕ ವ್ಯವಸ್ಥೆಯ ಉತ್ತಮ ದತ್ತಾಂಶ ವಿಶ್ಲೇಷಣೆಗೆ ಬಳಸಲು ಇಲಾಖಾ ಮುಖ್ಯಸ್ಥರು ಅಗತ್ಯ ಕ್ರಮವಹಿಸತಕ್ಕದ್ದು.

* ಶಾಲಾ/ ಕಾಲೇಜಿಗೆ ಗೈರುಹಾಜರಾಗುವ ವಿದ್ಯಾರ್ಥಿಗಳನ್ನು ಟ್ರ್ಯಾಕ್ ಮಾಡಲು ಹಾಗೂ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ಸದರಿ ತಂತ್ರಾಂಶದ ನೆರವಿನಿಂದ ಕ್ರಮವಹಿಸತಕ್ಕದ್ದು.

* Al-Based Student Facial Attendance Monitoring System 2, ಮೂಲಕ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ದಿನನಿತ್ಯ ದಾಖಲಿಸಲಾಗುವ ಹಾಜರಾತಿ ವಿವರಗಳು SATS ತಂತ್ರತಾಂಶದ ಮೂಲಕ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಿರತಕ್ಕದ್ದು. 16. “ನಿರಂತರ ಕಾರ್ಯಕ್ರಮದ ಆದೇಶದ ಪ್ರತಿಯನ್ನು ಇಲಾಖೆಗಳ ಜಾಲತಾಣದಲ್ಲಿ ಪ್ರಕಟಿಸತಕ್ಕದ್ದು.

Dailyhunt
Disclaimer: This content has not been generated, created or edited by Dailyhunt. Publisher: Kannada Dunia