ಕನ್ನಡದುನಿಯಾ

1.6M Followers

BIG NEWS: ಶಿಕ್ಷಕರಿಂದ ಕಠಿಣ ನಿರ್ಧಾರ, ನಿಷ್ಠಾ ತರಬೇತಿ ಬಹಿಷ್ಕಾರ

04 Oct 2021.07:58 AM

ಬೆಂಗಳೂರು: ನಿಷ್ಠಾ ತರಬೇತಿ ಬಹಿಷ್ಕರಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಿಕ್ಷಕರಿಗೆ ಕರೆ ನೀಡಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯಿಂದ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗಿದ್ದು, ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿ ನಿಷ್ಠಾ -3.0 ತರಬೇತಿಯನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿದೆ.

6 ರಿಂದ 8ನೇ ತರಗತಿಗೆ ಪಾಠ ಮಾಡಲು ಪದವೀಧರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಈ ಸಂಬಂಧ 2017ರಲ್ಲಿ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿದೆ.

2016 -17 ಕ್ಕಿಂತ ಮೊದಲು ಒಂದರಿಂದ ಏಳನೇ ತರಗತಿವರೆಗೆ ಪಾಠ ಮಾಡುತ್ತಿದ್ದ ಎಲ್ಲಾ ಶಿಕ್ಷಕರನ್ನು ಒಂದರಿಂದ ಐದನೇ ತರಗತಿವರೆಗೆ ಬೋಧನೆ ಮಾಡಲು ಮಾತ್ರ ನಿಯೋಜಿಸಲಾಗಿದೆ.

ಒಂದರಿಂದ ಐದನೇ ತರಗತಿಗೆ ಪಾಠ ಮಾಡುತ್ತಿರುವ ಸೇವಾನಿರತ ಶಿಕ್ಷಕರಲ್ಲಿ ಸುಮಾರು 80 ಸಾವಿರ ಪದವೀಧರ ಶಿಕ್ಷಕರಿದ್ದಾರೆ. ಈ ಶಿಕ್ಷಕರನ್ನು ಪದವೀಧರ ಶಿಕ್ಷಕರು ಎಂದು ಪರಿಗಣಿಸಿ ಆರರಿಂದ ಎಂಟನೇ ತರಗತಿಗೆ ಪಾಠ ಮಾಡಲು ನಿಯಮಾವಳಿಗೆ ತಿದ್ದುಪಡಿ ತರಬೇಕೆಂದು ಅನೇಕ ಬಾರಿ ಒತ್ತಾಯ ಮಾಡಿದ್ದರೂ, ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಿಷ್ಠಾ ತರಬೇತಿಯನ್ನು ಬಹಿಷ್ಕರಿಸಲಾಗಿದೆ ಎಂದು ಹೇಳಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags