Sunday, 02 Aug, 6.01 am ಕನ್ನಡದುನಿಯಾ

ಹೋಮ್
ಬಿಗ್ ನ್ಯೂಸ್: ಇಂದಿನಿಂದ ಸಂಡೇ ಲಾಕ್ ಡೌನ್ ಇಲ್ಲ, ನೈಟ್ ಕರ್ಫ್ಯೂ ಕೂಡ ತೆರವು

ಬೆಂಗಳೂರು: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಲಾಕ್ಡೌನ್ ಸಡಿಲಿಕೆ ಮೂರನೇ ಆಗಸ್ಟ್ 1ರಿಂದ ಜಾರಿಯಾಗಿದೆ.

ನಿನ್ನೆ ರಾತ್ರಿಯಿಂದಲೇ ಅನ್ಲಾಕ್ 3.0 ಜಾರಿಯಾಗಿದ್ದು ಇನ್ನು ಮುಂದೆ ಭಾನುವಾರದ ಲಾಕ್ಡೌನ್ ಇರುವುದಿಲ್ಲ. ಅದೇ ರೀತಿ ಶನಿವಾರ ರಾತ್ರಿಯಿಂದಲೇ ನೈಟ್ ಕರ್ಫ್ಯೂ ತೆರವುಗೊಳಿಸಲಾಗಿದೆ.

ಜುಲೈ ತಿಂಗಳ ಭಾನುವಾರಗಳಂದು ಲಾಕ್ ಡೌನ್, ಪ್ರತಿದಿನ ನೈಟ್ ಕರ್ಫ್ಯೂ ಜಾರಿಯಲ್ಲಿತ್ತು. ಆಗಸ್ಟ್ 1ರಿಂದ ನೈಟ್ ಕರ್ಫ್ಯೂ, ಭಾನುವಾರದ ಲಾಕ್ ಡೌನ್ ತೆರವು ಮಾಡಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top