Dailyhunt Logo
  • Light mode
    Follow system
    Dark mode
    • Play Story
    • App Story
ಬಿಗ್ ನ್ಯೂಸ್: ಸಂಪುಟದಿಂದ ಕೆಲವರಿಗೆ ಕೊಕ್‌ - ಯಾರಿಗೆಲ್ಲಾ ಸಿಗುತ್ತೆ ಚಾನ್ಸ್.?

ಬಿಗ್ ನ್ಯೂಸ್: ಸಂಪುಟದಿಂದ ಕೆಲವರಿಗೆ ಕೊಕ್‌ - ಯಾರಿಗೆಲ್ಲಾ ಸಿಗುತ್ತೆ ಚಾನ್ಸ್.?

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದು ಗಣಪತಿ ಹಬ್ಬದ ವೇಳೆಗೆ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿದೆ.

ಸಂಪುಟದಿಂದ ಕೆಲವು ಸಚಿವರನ್ನು ಕೈಬಿಟ್ಟು ಸರ್ಕಾರ ರಚನೆಗೆ ಸಾಥ್ ನೀಡಿದವರು ಹಾಗೂ ಹಿರಿಯ ಶಾಸಕರಿಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಿದ್ದಾರೆ. ದೆಹಲಿ ಪ್ರವಾಸದ ಬಳಿಕ ಸಂಪುಟ ವಿಸ್ತರಣೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಲಾಗಿದೆ.

ಆರ್. ಶಂಕರ್, ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್ ಹಾಗೂ ಕೆಲವು ಹಿರಿಯ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದು, ಕೆಲವರನ್ನು ಸಂಪುಟದಿಂದ ಕೈಬಿಡಲಾಗುವುದು. ತಮ್ಮನ್ನು ಸಂಪುಟದಿಂದ ಕೈಬಿಡುವ ಸುಳಿವರಿತ ಕೆಲ ಸಚಿವರು ಕುರ್ಚಿ ಉಳಿಸಿಕೊಳ್ಳಲು ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ ಈ ಸಲ ಯಾವುದೇ ಸುಳಿವು ನೀಡದೇ ಸಂಪುಟ ವಿಸ್ತರಣೆಯಲ್ಲಿ ಗೌಪ್ಯತೆ ಕಾಯ್ದುಕೊಳ್ಳಲಾಗುವುದು ಸಚಿವರಾಗುವವರನ್ನು ಹೊರತುಪಡಿಸಿ ಉಳಿದವರಿಗೆ ಮಾಹಿತಿ ನೀಡುವುದಿಲ್ಲ ಎನ್ನಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia