ಕನ್ನಡದುನಿಯಾ
ಕನ್ನಡದುನಿಯಾ

ಬಿಗ್‌ ನ್ಯೂಸ್: SSLC ಪರೀಕ್ಷೆಗೆ ರೆಡಿಯಾದ ವಿದ್ಯಾರ್ಥಿಗಳಿಗೆ ಭರ್ಜರಿ ‌ʼಗುಡ್ ನ್ಯೂಸ್ʼ

ಬಿಗ್‌ ನ್ಯೂಸ್: SSLC ಪರೀಕ್ಷೆಗೆ ರೆಡಿಯಾದ ವಿದ್ಯಾರ್ಥಿಗಳಿಗೆ ಭರ್ಜರಿ ‌ʼಗುಡ್ ನ್ಯೂಸ್ʼ
  • 1056d
  • 2.7k shares

ಬೆಂಗಳೂರು: ಎಸ್‌ಎಸ್‌ಎಲ್ಸಿ ಪರೀಕ್ಷೆಗೆ ಸಿದ್ಧತೆಗಳನ್ನು ಆರಂಭಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ವಿಡಿಯೋ ಸಂವಾದದ ವೇಳೆ ಸಚಿವರು ಈ ಕುರಿತಾಗಿ ಸೂಚನೆ ನೀಡಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಜ್ವರ ತಪಾಸಣೆ ನಡೆಸುವುದು ಕಡ್ಡಾಯವಾಗಿದೆ. ಪರೀಕ್ಷಾ ಕೇಂದ್ರಕ್ಕೆ ಬಂದ ವೇಳೆ ಮಕ್ಕಳ ಮಾಸ್ಕ್, ಸ್ಯಾನಿಟೈಸರ್ ಒದಗಿಸಿ ಥರ್ಮಲ್ ಸ್ಕ್ರೀನಿಂಗ್ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ತಪಾಸಣೆಗೆ ಒಳಪಡಿಸಿದ ನಂತರ ಪರೀಕ್ಷೆಗೆ ಹಾಜರುಪಡಿಸಲು ಸೂಚಿಸಲಾಗಿದೆ. ನೆಲದ ಮೇಲೆ, ಬಯಲಿನಲ್ಲಿ ಪರೀಕ್ಷೆ ಬರೆಸದಂತೆ ಎಚ್ಚರಿಕೆ ವಹಿಸಬೇಕು. ಪರೀಕ್ಷೆ ಬರೆಯಲು ಅಗತ್ಯವಾದ ಡೆಸ್ಕ್, ಬೆಂಚುಗಳನ್ನು ವ್ಯವಸ್ಥೆ ಮಾಡಬೇಕು.

No Internet connection

Link Copied