ವಾಣಿಜ್ಯ
ಬಿಗ್ ಶಾಕಿಂಗ್ ನ್ಯೂಸ್: ಗ್ಯಾಸ್ ಬೆಲೆ ಮತ್ತೆ ಹೆಚ್ಚಳ - ಈಗ CNG, PNG ದರ ಪರಿಷ್ಕರಣೆ

ನವದೆಹಲಿ: ದೆಹಲಿ -ಎನ್.ಸಿ.ಆರ್.ನಲ್ಲಿ CNG ಮತ್ತು PNG ಬೆಲೆ ಹೆಚ್ಚಿಸಲಾಗಿದೆ. ಸಿ.ಎನ್.ಜಿ. ಅನಿಲ ಬೆಲೆಯನ್ನು ಪ್ರತಿ ಕೆಜಿಗೆ 70 ಪೈಸೆ ಮತ್ತು ಪಿ.ಎನ್.ಜಿ. ಅನಿಲ ದರವನ್ನು 91 ಪೈಸೆಯಷ್ಟು ಹೆಚ್ಚಳ ಮಾಡಲಾಗಿದ್ದು, ಇಂದು ಬೆಳಿಗ್ಗೆ 6 ಗಂಟೆಯಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ.
ದೆಹಲಿಯಲ್ಲಿ ಸಿ.ಎನ್.ಜಿ. ಬೆಲೆ ಪ್ರತಿ ಕೆಜಿಗೆ 43.40 ರೂಪಾಯಿಗೆ ಏರಿಕೆಯಾಗಿದೆ. ನೋಯ್ಡಾ, ಗ್ರೇಟರ್ ನೋಯ್ಡಾದಲ್ಲಿ ಸಿ.ಎನ್.ಜಿ. ಪ್ರತಿ ಕೆಜಿಗೆ 49.08 ರೂ. ದರದಲ್ಲಿ ಲಭ್ಯವಿರುತ್ತದೆ. ದೆಹಲಿಯಲ್ಲಿ ಪಿ.ಎನ್.ಜಿ. ಹೊಸ ಬೆಲೆ 28.41 ರೂ. ಆಗಿದೆ ಎನ್ನಲಾಗಿದೆ.
ಸೋಮವಾರವಷ್ಟೇ ಎಲ್ಪಿಜಿ ಪ್ರತಿ ಸಿಲಿಂಡರ್ ಗೆ 25 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಒಂದು ತಿಂಗಳಲ್ಲಿ ನಾಲ್ಕನೇ ಬಾರಿಗೆ ಎಲ್.ಪಿ.ಜಿ. ದರ ಹೆಚ್ಚಳವಾಗಿದೆ. ಫೆಬ್ರವರಿಯಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 125 ರೂಪಾಯಿ ಏರಿಕೆಯಾಗಿದೆ.
With effect from 6 am on 2nd March 2021, revised CNG price in NCT of Delhi is Rs.43.40/- per kg; while revised PNG price is Rs.28.41/- per SCM (including VAT).
- Indraprastha Gas Ltd (@IGLSocial) March 1, 2021