Dailyhunt
ಬೋಜಪುರಿಯ ಮತ್ತೊಂದು ಸಿನಿಮಾದಲ್ಲಿ ನಟಿ ಹರ್ಷಿಕಾ ಪೂಣಚ್ಚ

ಬೋಜಪುರಿಯ ಮತ್ತೊಂದು ಸಿನಿಮಾದಲ್ಲಿ ನಟಿ ಹರ್ಷಿಕಾ ಪೂಣಚ್ಚ

ಹಲವಾರು ಭಾಷೆಗಳಲ್ಲಿ ಅಭಿನಯಿಸಿರುವ ಹರ್ಷಿಕಾ ಪೂಣಚ್ಚ ಈಗಾಗಲೇ ಬೋಜಪುರಿ ಸಿನಿಮಾರಂಗದಲ್ಲಿ ಪವನ್ ಸಿಂಗ್ ಜೊತೆ 'ಹಮ್ ಹೈನ್ ರಾಹಿ ಪ್ಯಾರ್ ಕೇ' ಚಿತ್ರದಲ್ಲಿ ನಟಿಸಿದ್ದು, ಇತ್ತೀಚೆಗೆ ಈ ಸಿನಿಮಾ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿತ್ತು.

ಇದರ ಬೆನ್ನಲ್ಲೇ ಮತ್ತೊಂದು ಬೋಜ್ ಪುರಿ ಸಿನಿಮಾದಲ್ಲಿ ಹರ್ಷಿಕಾ ಪೂಣಚ್ಚ ಅಭಿನಯಿಸುತ್ತಿದ್ದಾರೆ. ಈ ಕುರಿತು ಹರ್ಷಿಕಾ ಪೂಣಚ್ಚ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ನಾಳೆ 'ವೀರಂ' ಚಿತ್ರದ ಟೀಸರ್ ರಿಲೀಸ್

ಪ್ರೇಮಾಂಶು ಸಿಂಗ್ ಈ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಿದ್ದು, 'ಸಜನ್ ರೇ ಜೂಟ್ ಮತ್ ಬೋಲೊ' ಎಂಬ ಶೀರ್ಷಿಕೆ ಇಟ್ಟಿದ್ದಾರೆ.

ಪ್ರದೀಪ್ ಪಾಂಡೆ ನಾಯಕನಾಗಿ ಅಭಿನಯಿಸಿದ್ದಾರೆ. ಸೊಲ್ಲಾಪುರದಲ್ಲಿ 15 ದಿನದ ಚಿತ್ರೀಕರಣವನ್ನು ಕಂಪ್ಲೀಟ್‌ ಮಾಡಿದ್ದಾರೆ. ನಾಸಿರ್ ಜಮಾಲ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia