Dailyhunt Logo
  • Light mode
    Follow system
    Dark mode
    • Play Story
    • App Story
BREAKING: ಆರ್.ಎಸ್.ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಶಿಕ್ಷಕರು 9 ತಿಂಗಳ ಬಳಿಕ ಸಸ್ಪೆಂಡ್

BREAKING: ಆರ್.ಎಸ್.ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಶಿಕ್ಷಕರು 9 ತಿಂಗಳ ಬಳಿಕ ಸಸ್ಪೆಂಡ್

ಯಾದಗಿರಿ: ಆರ್.ಎಸ್.ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ರಾಜ್ಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಕಳೆದ ನವೆಂಬರ್ ನಲ್ಲಿ ನಡೆದಿದ್ದ ಆರ್.ಎಸ್.ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಶಿಕ್ಷಕರನ್ನು ಈಗ 9 ತಿಂಗಳ ಬಳಿಕ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ರಾಯ ಸರ್ಕಾರದ ಈ ಕ್ರಮಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುರಾಜ್ ಜೋಶಿ ಹಾಗೂ ಅಣ್ಣಸಾಹೇಬ್ ಅಮಾನತುಗೊಂಡಿರುವ ಶಿಕ್ಷಕರು. ಗುರುರಾಜ್ ಅವರು ಹುಣಸಗಿ ಬಾಲಕಿಯರ ಶಾಲೆಯ ಶಿಕ್ಷಕರು. ಅಣ್ಣಾಸಾಹೇಬ್ ಕುಪ್ಪಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಇಬ್ಬರು ಶಿಕ್ಷಕರನ್ನು ಸಸ್ಪೆಂಡ್ ಮಾಡಿ ಯಾದಗಿರಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia