ಕೋಲಾರ: ಭೀಮನ ಅಮಾವಾಸ್ಯೆ ದಿನವೇ ಹೆಂಡತಿಯಿಂದ ಗಂಡನ ಕೊಲೆ ನಡೆದಿದೆ. ಗಂಡನ ಪೂಜೆ ಮಾಡುವ ಬದಲು ಗಂಡನ ಕತೆಯನ್ನೇ ಪತ್ನಿ ಮುಗಿಸಿದ್ದಾಳೆ. ಗಂಡನನ್ನು ಕೊಂದು ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ.
ಕೋಲಾರ ತಾಲೂಕಿನ ಚೆನ್ನಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಪತಿ ನಾರಾಯಣ ಸ್ವಾಮಿ(68) ಅವರನ್ನು ಪತ್ನಿ ಜಗದಾಂಬ(58) ಕೊಲೆ ಮಾಡಿದ್ದಾಳೆ.
ರಾತ್ರಿ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದ ಪತ್ನಿ ಜಗದಾಂಬ ಪತಿ ನಿದ್ದೆಗೆ ಜಾರಿದ ನಂತರ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ.
ಜಮೀನು ಮಾರಾಟ ಮಾಡಿದ ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಮತ್ತು ಇರುವ ಜಮೀನನ್ನು ಕೂಡ ಮಾರಾಟ ಮಾಡುತ್ತಾನೆ ಎಂದು ಕೊಲೆ ಮಾಡಿದ್ದಾಳೆ. ಪತಿ ನಾರಾಯಣಪ್ಪ ಮತ್ತು ಪತ್ನಿ ಜಗದಾಂಬ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆದರೆ ಹಣಕ್ಕಾಗಿ ತೋಟದ ಮನೆಗೆ ಕರೆತಂದು ಪತಿಯನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

