Dailyhunt Logo
  • Light mode
    Follow system
    Dark mode
    • Play Story
    • App Story
BREAKING : ಲಡಾಖ್ ನ ಲೇಹ್'ನಲ್ಲಿ  5.5 ತೀವ್ರತೆಯ ಪ್ರಬಲ ಭೂಕಂಪ |Earthquake

BREAKING : ಲಡಾಖ್ ನ ಲೇಹ್'ನಲ್ಲಿ 5.5 ತೀವ್ರತೆಯ ಪ್ರಬಲ ಭೂಕಂಪ |Earthquake

ಡಾಖ್‌ನ ಲೇಹ್‌ನಲ್ಲಿ ಗುರುವಾರ ಮುಂಜಾನೆ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

ಆಗಸ್ಟ್ 13ರಂದು ಬೆಳಗ್ಗೆ 6:05ಕ್ಕೆ ಭೂಕಂಪ ಸಂಭವಿಸಿದ್ದು, ಭೂಮಿಯ 10 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಪತ್ತೆಯಾಗಿದೆ.

ಲೇಹ್ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ ಎಂದು NCS ಮಾಹಿತಿ ನೀಡಿದೆ.

NCS ಪ್ರಕಾರ, ಭೂಕಂಪದ ಕೇಂದ್ರಬಿಂದು 36.881° ಉತ್ತರ ಅಕ್ಷಾಂಶ ಮತ್ತು 74.402° ಪೂರ್ವ ರೇಖಾಂಶದಲ್ಲಿ ಇತ್ತು. ಭೂಕಂಪದಿಂದ ಸದ್ಯಕ್ಕೆ ಯಾವುದೇ ಹಾನಿ ಅಥವಾ ಜೀವಹಾನಿ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia