ಇಸ್ಲಾಮಾದ್: ಪಾಕಿಸ್ತಾನದ ಜೆ ಎಫ್ -17 ಯುದ್ಧ ವಿಮಾನ ಪತನಗೊಂಡಿರುವ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದಾಗಿ ಯುದ್ಧ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಮಿಯಾನ್ವಾಲಿ ಜಿಲ್ಲೆಯ ಕಮ್ರಾ ಕಾಲನ್ ಬಳಿ ಈ ದುರಂತ ಸಂಭವಿಸಿದೆ. ಜೆಫ್-17 ಯುದ್ಧ ವಿಮಾನದ ತರಬೇತಿ ವೇಳೆ ಎಂಜೀನ್ ನಲ್ಲಿ ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ ಎನ್ನಲಾಗಿದೆ.
ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದರು. ತನಿಖೆ ಮುಂದುವರೆದಿದೆ.
ಇನ್ನು ಜೆ ಎಫ್-17 ಯುದ್ಧ ವಿಮಾನ ಚೀನಾ ನಿರ್ಮಿತ ಯುದ್ಧ ವಿಮಾನವಾಗಿದೆ. ಪಾಕಿಸ್ತಾನದಲ್ಲಿ ಈವರೆಗೆ 7 ಜೆ ಎಫ್-17 ಯುದ್ಧವಿಮಾನಗಳು ಪತನಗೊಂಡಿವೆ.

