ದಾವಣಗೆರೆ: ಸದಾಕಾಲ ಕುಡುದು ಬಂದು ಗಲಾಟೆ ಮಾಡುತ್ತಿದ್ದ ಪತಿಯ ಕುಡುತದ ಚಟಕ್ಕೆ ಬೇಸತ್ತ ಪತ್ನಿ ಪತಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆಗೈದ ಘೋರ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದಿದೆ.
ಶಿವಪ್ಪ ಕೊಲೆಯಾದ ಪತಿ. ಸಾವಿತ್ರಿ ಪತಿಯನ್ನೇ ಕೊಂದ ಪತ್ನಿ.
ತಾಯಿಯ ಕೃತ್ಯಕ್ಕೆ ಮಗ ಹನುಮೇಗೌಡ ಸಾಥ್ ನೀಡಿದ್ದಾನೆ. ಕುಡಿದು ಗಲಾಟೆ ಮಾಡುತ್ತಿದ್ದ ಪತಿಯ ಕಾಟಕ್ಕೆ ನೊಂದು ಕಲ್ಲಿನಿಂದ ಪತಿಯ ತಲೆಯನ್ನು ಜಜ್ಜಿ ಹತ್ಯೆಗೈದಿದ್ದಾಳೆ. ಕೊಲೆ ವೇಳೆ ಪುತ್ರ ಹನುಮೇಗೌಡ ಮನೆಯಲ್ಲಿ ಇರಲಿಲ್ಲ. ತಂದೆಯ ಶವ ಬೇರೆಡೆ ಸಾಗಿಸಲು ಪುತ್ರ ಸಹಾಯ ಮಾಡಿದ್ದ.
ಕೃತ್ಯದ ಬಳಿಕ ಹನುಮೇಗೌಡ ತಲೆಮರೆಸಿಕೊಂಡಿದ್ದಾನೆ. ಆರೋಪಿ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

