ಕಲಬುರಗಿ: ಪತ್ನಿ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಲ್ಲೂರ ಕೆ. ಗ್ರಾಮದಲ್ಲಿ ನಡೆದಿದೆ.
ಸಿದ್ದಮ್ಮ(30) ಕೊಲೆಯಾದ ಮಹಿಳೆ. ಸಿದ್ದಮ್ಮರನ್ನು ಕೊಲೆ ಮಾಡಿ ಪತಿ ಭೂತಾಳಿ ನಾಯ್ಕೋಡಿ ಪರಾರಿಯಾಗಿದ್ದಾನೆ. ಜಮೀನಿಗೆ ಹೋಗೋಣ ಬಾ ಎಂದು ಬೈಕ್ ನಲ್ಲಿ ಕರೆದೊಯ್ದ ಆರೋಪಿ ಮಾರ್ಗಮಧ್ಯ ಪತ್ನಿ ಮೇಲೆ ದಾಳಿ ಮಾಡಿದ್ದಾನೆ.
ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

