Monday, 25 Jan, 9.20 am ಕನ್ನಡದುನಿಯಾ

ಮನೋರಂಜನೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಹತ್ವದ ನಿರ್ಧಾರ, ಕೃಷಿ ಇಲಾಖೆ ಕಾರ್ಯಕ್ರಮದಲ್ಲಿ ಭಾಗಿ

ಬೆಂಗಳೂರು: ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಕೃಷಿ ಸೇವೆಗೆ ಮೆಚ್ಚಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಬಿ.ಸಿ. ಪಾಟೀಲ್ ಕೃಷಿಯಲ್ಲಿ ತರುತ್ತಿರುವ ನೂತನ ಬದಲಾವಣೆ ಹಾಗೂ ರೈತರ ಅಭಿವೃದ್ಧಿಗಿನ‌ ಚಿಂತನೆಗಳನ್ನು ಮೆಚ್ಚಿರುವ ದರ್ಶನ್ ಈ ಕುರಿತು ಅವರೊಂದಿಗೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಸಚಿವರ ಜೊತೆ ಭಾಗಿಯಾಗಲಿದ್ದಾರೆ. ದರ್ಶನ್ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಸದ್ಯದರಲ್ಲಿಯೇ ದಿನಾಂಕವೂ ಪ್ರಕಟಗೊಳ್ಳಲಿದೆ ಎಂದು ಹೇಳಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top