ನವದೆಹಲಿ: ದೇಶೀಯ ಆಭರಣ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಇಳಿಕೆ ಪರ್ವ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಚೇತರಿಸಿಕೊಂಡ ಬೆನ್ನಲ್ಲೇ, ಇಂದು (ಆಗಸ್ಟ್ 28, ಶುಕ್ರವಾರ) ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ.
ನಿನ್ನೆ ಪ್ರತಿ ಗ್ರಾಮ್‌ಗೆ ₹70 ಇಳಿಕೆಯಾಗಿದ್ದ ಬಂಗಾರದ ದರ, ಇಂದು ಬರೋಬ್ಬರಿ ₹290 ರಷ್ಟು ತಗ್ಗಿದೆ. ಇದರಿಂದಾಗಿ 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ ಮತ್ತೆ ₹16,000 ಗಡಿಯಿಂದ ಕೆಳಕ್ಕಿಳಿದಿದ್ದರೆ, 18 ಕ್ಯಾರಟ್ ಚಿನ್ನದ ದರ ₹12,000 ಕ್ಕಿಂತ ಕಡಿಮೆಯಾಗಿದೆ. ಇತ್ತ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಬೆಳ್ಳಿ ಬೆಲೆಯಲ್ಲೂ ಇಂದು ಗ್ರಾಮ್‌ಗೆ ₹5 ಇಳಿಕೆಯಾಗಿದೆ.
ಇಂದಿನ ಚಿನ್ನ ಮತ್ತು ಬೆಳ್ಳಿ ದರ ವಿವರ (ಆಗಸ್ಟ್ 28):
24 ಕ್ಯಾರಟ್ (ಅಪರಂಜಿ ಚಿನ್ನ): 1 ಗ್ರಾಮ್‌ಗೆ ₹15,982 (10 ಗ್ರಾಮ್‌ಗೆ ₹1,59,820)
22 ಕ್ಯಾರಟ್ (ಆಭರಣ ಚಿನ್ನ): 1 ಗ್ರಾಮ್‌ಗೆ ₹14,650 (10 ಗ್ರಾಮ್‌ಗೆ ₹1,46,500)
ಬೆಳ್ಳಿ ದರ: 1 ಗ್ರಾಮ್‌ಗೆ ₹255 (100 ಗ್ರಾಮ್‌ಗೆ ₹25,500)
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,59,820
ನಾಗ್ಪುರ ₹1,59,820
ಮುಂಬೈ ₹1,59,820
ಚೆನ್ನೈ ₹1,59,820
ಕೋಲ್ಕತ್ತಾ ₹1,59,820
ಪಾಟ್ನಾ ₹1,59,870
ಸೂರತ್ ₹1,59,870
ಚಂಡೀಗಢ ₹1,59,870
ಲಕ್ನೋ ₹1,59,870

