Kannada News >> ಕನ್ನಡದುನಿಯಾ >> home
Wednesday, 07 Mar, 8.03 am

ಚಿತ್ರದ ಸಂಭಾವನೆಯನ್ನು ಟಾಯ್ಲೆಟ್ ಕಟ್ಟಲು ಕೊಟ್ಲು ಹುಡುಗಿ

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ 'ಸ್ವಚ್ಚತಾ ಆಂದೋಲನ' ಕ್ಕೆ ಸಮಾಜದ ವಿವಿಧ ಸ್ತರದ ಜನತೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಈ ಆಂದೋಲನಕ್ಕೆ ಕೈ ಜೋಡಿಸುವ ಸಲುವಾಗಿ ತನ್ನ ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂಬ ಕಾರಣಕ್ಕೆ ಕರ್ನಾಟಕದ ಬಾಲಕಿ ಮಲ್ಲಮ್ಮ ಉಪವಾಸ ಕುಳಿತು ಕೊನೆಗೂ ತನ್ನ ಕಾರ್ಯ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು.

ಇಂತಹುದೇ ಹಲವು ಪ್ರಕರಣಗಳು ದೇಶದ ವಿವಿಧೆಡೆ ನಡೆದಿದ್ದು, ಕರ್ನಾಟಕದ ಮಲ್ಲಮ್ಮನ ಪ್ರಕರಣವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಈಗ ಈ ಕುರಿತು ಚಲನಚಿತ್ರ ನಿರ್ಮಾಣವಾಗಿದ್ದು, ಇದರಲ್ಲಿ ಮಲ್ಲಮ್ಮನ ಪಾತ್ರ ನಿರ್ವಹಿಸಿದ್ದ ಬಾಲ ನಟಿ ತನಗೆ ಬಂದ ಸಂಭಾವನೆ ಒಂದು ಲಕ್ಷ ರೂಪಾಯಿಗಳನ್ನು ಶೌಚಾಲಯ ನಿರ್ಮಾಣಕ್ಕೆಂದು ನೀಡುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾಳೆ.

ಈ ಚಿತ್ರದಲ್ಲಿ ಅಭಿನಯಿಸಿರುವ 14 ವರ್ಷದ ಪ್ರತ್ಯಕ್ಷಾ, ತನ್ನ ಮನೆಯಲ್ಲಿ ಸ್ವತಃ ಇಂತಹ ಸಮಸ್ಯೆಯೆನ್ನುದುರಿಸಿದ್ದು, ಈಗ ತನ್ನ ಸಂಭಾವನೆಯನ್ನು ಮಲ್ಲಮ್ಮನ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ನೀಡಿದ್ದಾಳೆ. ಚಿತ್ರತಂಡವೂ ಸಹ ವಿವಿಧೆಡೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ನೆರವು ನೀಡುವುದಾಗಿ ಘೋಷಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia