Thursday, 22 Oct, 9.35 am ಕನ್ನಡದುನಿಯಾ

ಹೋಮ್
ದಾಖಲೆ ಬರೆದ RCB ಸ್ಟಾರ್ ಮೊಹಮ್ಮದ್ ಸಿರಾಜ್, ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ನತ್ತ ಕೊಹ್ಲಿ ಬಳಗ

ಅಬುಧಾಬಿ: ಮಧ್ಯಮ ವೇಗಿ ಮೊಹಮ್ಮದ್ ಸಿರಾಜ್ ದಾಖಲೆಯ ಪ್ರದರ್ಶನದೊಂದಿಗೆ ಸಂಘಟಿತ ಪ್ರಯತ್ನ ನಡೆಸಿದ ವಿರಾಟ್ ಕೊಹ್ಲಿ ಪಡೆ ಭರ್ಜರಿ ಗೆಲುವು ದಾಖಲಿಸಿದೆ.

ಅಬುಧಾಬಿಯ ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್ ಗೆಲುವು ಕಂಡ ಆರ್ಸಿಬಿ ಪ್ಲೇ ಆಫ್ ನತ್ತ ದಾಪುಗಾಲಿಟ್ಟಿದೆ. ಸಿರಾಜ್ ಸತತ ಎರಡು ಓವರ್ ಗಳನ್ನು ಮೇಡನ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.

ಐಪಿಎಲ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಸಿರಾಜ್ ಪಾತ್ರರಾಗಿದ್ದಾರೆ. ಆರಂಭಿಕ ಸ್ಪೆಲ್ ನಲ್ಲಿ ಎರಡು ಓವರ್ ಬೌಲಿಂಗ್ ಮಾಡಿದ ಅವರು ಮೇಡನ್ ನೊಂದಿಗೆ 3 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ.

ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದ ಕೊಲ್ಕತ್ತಾ ತಂಡ 13ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಕನಿಷ್ಠ ಮೊತ್ತ ಕಲೆ ಹಾಕಿದ ಕುಖ್ಯಾತಿಗೆ ಪಾತ್ರವಾಗಿದೆ. 10 ಪಂದ್ಯಗಳಲ್ಲಿ 7 ಗೆಲುವು, ಮೂರು ಸೋಲಿನೊಂದಿಗೆ 14 ಅಂಕ ಕಲೆಹಾಕಿರುವ ಆರ್ಸಿಬಿ ಪ್ಲೇಆಫ್ ಹಂತದತ್ತ ಹೆಜ್ಜೆ ಹಾಕಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top