Friday, 30 Oct, 4.56 am ಕನ್ನಡದುನಿಯಾ

ಹೋಮ್
ಈ ಹೆಗ್ಗಳಿಕೆಗೆ ಪಾತ್ರವಾಗಿದೆ ರಾಷ್ಟ್ರ ರಾಜಧಾನಿ ನವದೆಹಲಿ

ದೆಹಲಿ ಸರ್ಕಾರ ಜಾರಿಗೆ ತಂದ ಎಲೆಕ್ಟ್ರಿಕ್​ ವಾಹನ ಪಾಲಿಸಿ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 3000 ಎಲೆಕ್ಟ್ರಿಕ್​ ಕಾರುಗಳು ನೋಂದಣಿಯಾಗಿವೆ. ದೆಹಲಿಯಲ್ಲಿ ಉಂಟಾಗಿರುವ ವಾಯು ಮಾಲಿನ್ಯ ನಿಯಂತ್ರಣ ಮಾಡಲು ಇದು ಮಹತ್ವದ ಹೆಜ್ಜೆಯಾಗಿದೆ.

ಎಲೆಕ್ಟ್ರಿಕ್​ ವಾಹನ ಪಾಲಿಸಿ ಬಳಿಕ 3000 ವಾಹನಗಳನ್ನ ನೋಂದಣಿ ಮಾಡಿಸಿಕೊಂಡ ದೇಶದ ಮೊದಲ ರಾಜ್ಯ ಎಂಬ ಕೀರ್ತಿಗೆ ದೆಹಲಿ ಪಾತ್ರವಾಗಿದೆ. ಅಲ್ಲದೇ ವಾಯು ಮಾಲಿನ್ಯ ತಡೆಗಾಗಿ ಪೆಟ್ರೋಲ್​, ಡಿಸೇಲ್​ ವಾಹನಗಳನ್ನ ಬದಿಯಿಟ್ಟು ಅತಿ ಹೆಚ್ಚು ಸಂಖ್ಯೆಯಲ್ಲಿ ಎಲೆಕ್ಟ್ರಿಕ್​ ವಾಹನಗಳನ್ನ ರಸ್ತೆಗಿಳಿಸುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಹೊಸ ಪಾಲಿಸಿ ಅನ್ವಯ ಎಲೆಕ್ಟ್ರಿಕ್​ ವಾಹನಗಳನ್ನ ಖರೀದಿ ಮಾಡುವವರಿಗೆ ದೆಹಲಿ ಸರ್ಕಾರ ವಿಶೇಷ ಸಬ್ಸಿಡಿ ನೀಡುವುದಾಗಿ ಹೇಳಿತ್ತು. ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಸರ್ಕಾರ ರಸ್ತೆ ತೆರಿಗೆ ಹಾಗೂ ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡೋದಾಗಿ ಹೇಳಿತ್ತು. ಅಲ್ಲದೇ ಇ - ವಾಹನಗಳನ್ನ ಉತ್ತೇಜಿಸುವ ಸಲುವಾಗಿ ಪ್ರತಿ 3 ಕಿಲೋಮೀಟರ್​ಗೆ ಒಂದರಂತೆ ಹೊಸ ಚಾರ್ಜಿಂಗ್​ ಕೇಂದ್ರಗಳನ್ನ ದೆಹಲಿಯಲ್ಲಿ ಸ್ಥಾಪನೆ ಮಾಡಲಾಗುತ್ತಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top