Dailyhunt Logo
  • Light mode
    Follow system
    Dark mode
    • Play Story
    • App Story
ಗಡ್ಡವನ್ನು ಹೀಗೆ ಕಪ್ಪಾಗಿಸಿ..!

ಗಡ್ಡವನ್ನು ಹೀಗೆ ಕಪ್ಪಾಗಿಸಿ..!

ಗಡ್ಡವನ್ನು ಕಪ್ಪಾಗಿ, ದಪ್ಪನಾಗಿ ಕಾಣಿಸುವಂತೆ ಮಾಡಿಕೊಳ್ಳಬೇಕು ಎಂಬುದು ಹೆಚ್ಚಿನ ಯುವಕರ ಬಯಕೆಯಾಗಿರುತ್ತದೆ. ಅದಕ್ಕಾಗಿ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ.

ನಿತ್ಯ ನಿಮ್ಮ ಗಡ್ಡವನ್ನು ಸ್ವಚ್ಛವಾಗಿ ತೊಳೆದುಕೊಂಡ ಬಳಿಕ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ. ಇದು ನಿಮ್ಮ ಗಡ್ಡವನ್ನು ಮೃದುವಾಗಿಸುತ್ತದೆ ಮಾತ್ರವಲ್ಲ ಕಪ್ಪು ಬಣ್ಣದಿಂದ ಹೊಳೆಯುವಂತೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಿಯರ್ಡ್ ಆಯಿಲ್ ಬಳಸಿಯೂ ನಿಮ್ಮ ಗಡ್ಡವನ್ನು ಆಕರ್ಷಣೀಯವಾಗಿಸಿಕೊಳ್ಳಬಹುದು.

ಆದರೆ ಉತ್ತಮ ಗುಣಮಟ್ಟದ ಎಣ್ಣೆ ಬಳಸುವುದು ಬಹಳ ಮುಖ್ಯ. ನಿಮ್ಮ ಗಡ್ಡ ತೆಳುವಾಗಿದ್ದರೆ ಬಿಯರ್ಡ್ ಪಿಲ್ಲರ್ ಬಳಸಿ. ಇದರಿಂದ ಕೂದಲಿಲ್ಲದ ಗ್ಯಾಪ್ ಮುಚ್ಚಿ ಸಂಪೂರ್ಣ ಗಡ್ಡ ಕಪ್ಪಾಗಿ ದಪ್ಪನಾಗಿ ಕಾಣಿಸುತ್ತದೆ.

ಕಾಫಿ ಪುಡಿಯನ್ನು ನೀರಿನಲ್ಲಿ ಕುದಿಸಿ, ದಪ್ಪನೆಯ ಪೇಸ್ಟ್ ತಯಾರಿಸಿ.

ಇದನ್ನು ಬ್ರಶ್ ಮೂಲಕ ನಿಮ್ಮ ಗಡ್ಡಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆ ಬಳಿಕ ನೀರಿನಿಂದ ಸ್ವಚ್ಛವಾಗಿ ತೊಳೆಯಿರಿ. ಇದರಿಂದಲೂ ನಿಮ್ಮ ಗಡ್ಡ ಕಪ್ಪಾಗಿ, ಆಕರ್ಷಣೀಯವಾಗಿ ಕಾಣಿಸುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia