ಕನ್ನಡದುನಿಯಾ

1.6M Followers

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಮನೆ ಬಾಗಿಲಿಗೆ ಬರಲಿದೆ ಶಾಲೆಗೆ ಕರೆದೊಯ್ಯುವ ವಾಹನ

30 Mar 2022.6:10 PM

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ. ಇನ್ಮುಂದೆ ಸರ್ಕಾರಿ ಶಾಲಾ ಮಕ್ಕಳನ್ನು ಕರೆದೊಯ್ಯಲು ಮನೆ ಬಾಗಿಲಿಗೆ ವಾಹನಗಳು ಬರಲಿವೆ.

ಹೌದು. ಗ್ರಾಮ ಪಂಚಾಯಿತಿಗೊಂದು ಸರ್ಕಾರಿ 'ಮಾದರಿ ಶಾಲೆ' ಅಭಿವೃದ್ಧಿಪಡಿಸುವ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ಮಕ್ಕಳನ್ನು ಮನೆಯಿಂದ ಶಾಲೆ ಮತ್ತು ಶಾಲೆಯಿಂದ ಮನೆಗೆ ಪಿಕಪ್-ಡ್ರಾಪ್ ಮಾಡಲು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ವಾಹನಗಳನ್ನು ಒದಗಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.

ನಾಗೇಶ್ ತಿಳಿಸಿದ್ದಾರೆ.

BIG NEWS: ಇನ್ನು ಬೆಂಗಳೂರು-ಮೈಸೂರು ಪ್ರಯಾಣ ಕೇವಲ 75 ನಿಮಿಷ; ಅಕ್ಟೋಬರ್ ನೊಳಗೆ 10 ಲೇನ್ ಹೆದ್ದಾರಿ ಸಿದ್ಧ: ನಿತಿನ್ ಗಡ್ಕರಿ

ಕೆನರಾ ಬ್ಯಾಂಕ್ ವತಿಯಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿ ಒದಗಿಸಲಾಗಿರುವ 2 ಮಾರುತಿ ಇಕೋ ವಾಹನಗಳನ್ನು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದರು.

ಈ ಯೋಜನೆ ಬಗ್ಗೆ ಮಾತನಾಡಿದ ಸಚಿವ ಬಿ.ಸಿ. ನಾಗೇಶ್ ಅವರು, ಕಾರ್ಪೊರೇಟ್ ಕಂಪನಿಗಳು, ಬ್ಯಾಂಕ್‌ಗಳು, ಕಂಪನಿಗಳು, ಕೈಗಾರಿಕೆಗಳು, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಆಸಕ್ತಿ ಹೊಂದಿರುವ ಸಂಸ್ಥೆಗಳು, ವ್ಯಕ್ತಿಗಳ ಮೂಲಕ ಮಾದರಿ ಶಾಲೆಗಳಿಗೆ ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣದ ಅಭಿವೃದ್ಧಿ, ಸಮಾಜ ಸೇವೆಯ ಮನೋಭಾವದಿಂದ ಆಸಕ್ತಿ ಇರುವ ಯಾವುದೇ ಕಂಪನಿ, ಸಂಘ-ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ವಾಹನ ಒದಗಿಸಲು ಮುಂದೆ ಬರಬಹುದು. ಈ ಮೂಲಕ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಅಭಿವೃದ್ಧಿಪಡಿಸಬಹುದಾಗಿದೆ ಎಂದು ಹೇಳಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags