ಕನ್ನಡದುನಿಯಾ

1.5M Followers

ಹೊಸ ಶಿಕ್ಷಣ ನೀತಿ ಜಾರಿ, 22,000 ಶಿಕ್ಷಕರಿಗೆ ಶಾಲಾ ಸಹಾಯಕರಾಗಿ ಬಡ್ತಿ ನೀಡಲು ಸಿಎಂ ಜಗನ್ ಆದೇಶ

03 Feb 2022.8:10 PM

ಆಂಧ್ರಪ್ರದೇಶ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಗುರುವಾರ ತಾಡೆಪಲ್ಲಿಯಲ್ಲಿರುವ ಸಿಎಂ ಕಚೇರಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಪರಿಶೀಲನಾ ಸಭೆ ನಡೆಸಿದ್ದಾರೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿಷಯವಾರು ಶಿಕ್ಷಕರು ಇರಬೇಕು. ನೂತನ ಶಿಕ್ಷಣ ನೀತಿಯಿಂದ 22,000 ಶಿಕ್ಷಕರಿಗೆ ಬಡ್ತಿ ನೀಡಲಾಗುವುದು.

ಮಾಧ್ಯಮಿಕ ದರ್ಜೆ ಶಿಕ್ಷಕರನ್ನು ಶಾಲಾ ಸಹಾಯಕರಾಗಿ ಮೇಲ್ದರ್ಜೆಗೇರಿಸಲು ಆದೇಶಿಸಲಾಗಿದೆ ಎಂದು ಸಿಎಂ ಜಗನ್ ತಿಳಿಸಿದ್ದಾರೆ.

ಬಡ್ತಿ ಮತ್ತು ವರ್ಗಾವಣೆಯನ್ನು ಶೀಘ್ರ ಪೂರ್ಣಗೊಳಿಸಿ ಜೂನ್ ವೇಳೆಗೆ ಶಿಕ್ಷಣ ಸುಧಾರಣೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು. ಪ್ರತಿ ಮಂಡಲದಲ್ಲಿ ಎರಡು ಪ್ರೌಢಶಾಲೆಗಳು ಮತ್ತು ಎರಡು ಕಾಲೇಜುಗಳು ಇರಬೇಕು. ಎಲ್ಲಾ NCERT ಶಿಫಾರಸುಗಳು ಜಾರಿಗೆ ಬರಬೇಕು. ಸಂಪನ್ಮೂಲ ಕೇಂದ್ರವನ್ನು ವಲಯ ಶಿಕ್ಷಣಾಧಿಕಾರಿಗಳ ಕಚೇರಿಯನ್ನಾಗಿ ಪರಿವರ್ತಿಸಬೇಕು ಎಂದು ಸೂಚಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags