Sunday, 11 Apr, 8.18 am ಕನ್ನಡದುನಿಯಾ

ಹೋಮ್
ಹೊಸದಾಗಿ ಖರೀದಿಸಿದ ಜಾಕೆಟ್ ಜೇಬಿನಲ್ಲಿ ಹಲ್ಲಿನ ಸೆಟ್‌ ಕಂಡು ಶಾಕ್‌ ಆದ ಮಹಿಳೆ

ಸ್ಕಾಟ್ಲೆಂಡ್‌ನ ಅಸ್ಡಾ ಸ್ಟೋರ್‌ನಲ್ಲಿ ಜಾಕೆಟ್ ಒಂದನ್ನು ಖರೀದಿ ಮಾಡಿದ ಮಹಿಳೆಯೊಬ್ಬರು ಅದರ ಜೇಬಿನಲ್ಲಿ ಕೃತಕ ಹಲ್ಲೊಂದು ಸಿಕ್ಕಿ ಬೆಚ್ಚಿ ಬಿದ್ದಿದ್ದಾರೆ.

ಇಲ್ಲಿನ ಡಂಬಾರ್ಟನ್‌ನ ಅಸ್ಡಾ ಸ್ಟೋರ್‌ನಲ್ಲಿ 30 ಪೌಂಡ್ (3000 ರೂ.) ತೆತ್ತು ಈ ಜಾಕೆಟ್ ಖರೀದಿಸಿದ್ದ ಮೆಲಿಸ್ಸಾ ಹಾಪ್ಕಿನ್ಸ್‌ಗೆ ಅದರ ಜೇಬಿ‌ನಲ್ಲಿ ಈ ಹಲ್ಲು ಸೆಟ್ ಸಿಕ್ಕಿದೆ.

ಮತ್ತು ಬರಿಸಿ ಮಹಿಳೆ ಮೇಲೆ ಅತ್ಯಾಚಾರ, ವಿಡಿಯೋ ಮಾಡಿ ಬ್ಲಾಕ್ ಮೇಲ್ -ದೂರು ಕೊಡಲು ಹೋದ್ರೆ ಬೆದರಿಸಿ ಕಳಿಸಿದ ಪೊಲೀಸರು

ಇದೇ ಶಾಪ್‌ಗೆ ಮುಂಚೆ ಭೇಟಿ ಕೊಟ್ಟಿದ್ದ ವ್ಯಕ್ತಿಯೊಬ್ಬರು ಇದೇ ಜಾಕೆಟ್ ‌ಅನ್ನು ಟ್ರೈ ಮಾಡಿ ನೋಡಿದ್ದು, ಆ ವೇಳೆ ಅದರ ಜೇಬಿನಲ್ಲಿ ಹಲ್ಲಿನ ಸೆಟ್ ಇಟ್ಟಿದ್ದಾರೆ.

ಹಲ್ಲಿನ ಸೆಟ್ ‌ಅನ್ನು ಅದರ ಮಾಲೀಕರಿಗೆ ತಲುಪಿಸಲೆಂದು ಮೆಲಿಸ್ಸಾ ಫೇಸ್ಬುಕ್‌ನಲ್ಲಿ ಮನವಿ ಮಾಡಿಕೊಂಡು ಪೋಸ್ಟ್ ಒಂದನ್ನು ಹಾಕಿದ್ದು, "ತಮ್ಮ ಕೆಳ ಹಲ್ಲಿನ ಸೆಟ್ ಕಳೆದುಕೊಂಡ ಡಂಬರ್ಟನ್‌ನ ನಿವಾಸಿಯೊಬ್ಬರಿಗೆ ಒಂದು ಮನವಿ ಅಷ್ಟೇ. ಅಸ್ಡಾದಲ್ಲಿ ನೀವು ಖರೀದಿಸಿ ಹಿಂದಿರುಗಿಸಿದ್ದ ಜಾಕೆಟ್ ಒಂದನ್ನು ನಾನು ಖರೀದಿಸಿದ್ದು, ಅದರ ಬಲಜೇಬಿನಲ್ಲಿ ಹಲ್ಲಿನ ಸೆಟ್ ಸಿಕ್ಕಿದೆ. ಅವನ್ನು ಅಸ್ಡಾಗೆ ಮರಳಿಸಲಾಗಿದೆ," ಎಂದಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಇಂಥದ್ದೆಲ್ಲಾ ಹೇಗೆ ಆಗಲು ಸಾಧ್ಯ ಎಂದು ಅಚ್ಚರಿಪಟ್ಟಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top