Dailyhunt
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸಂಯುಕ್ತ ಹೊರನಾಡ್

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸಂಯುಕ್ತ ಹೊರನಾಡ್

ಖ್ಯಾತ ಪೋಷಕ ನಟಿ ಸುಧಾ ಬೆಳವಾಡಿ ಅವರ ಪುತ್ರಿ ನಟಿ ಸಂಯುಕ್ತ ಹೊರನಾಡ್ ಇಂದು ತಮ್ಮ 30ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಂಯುಕ್ತ ಹೊರನಾಡ್ 2011ರಂದು ದೂದ್ ಪೇಡಾ ದಿಗಂತ್ ನಟನೆಯ 'ಲೈಫು ಇಷ್ಟೇನೆ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಪ್ರಾಣಿ ಪ್ರೇಮಿಯಾದ ಸಂಯುಕ್ತ ಹೊರನಾಡ್ ತಮ್ಮ ಪ್ರೀತಿಯ ಶ್ವಾನದೊಂದಿಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ʼಇಬೇʼನಲ್ಲಿ ಸಜೀವ ಬಾಂಬ್ ಮಾರಲು ಹೋಗಿದ್ದ ಲೋಹ ಶೋಧಕ.!

ನಟಿ ಸಂಯುಕ್ತ ಹೊರನಾಡ್ 1991 ಮೇ 23ರಂದು ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಕಲಾವಿದರು ಸಂಯುಕ್ತ ಹೊರನಾಡ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia