Dailyhunt
ಇಂದಿನ ಪಂದ್ಯದಲ್ಲಿ ಈ ದಾಖಲೆಗೆ ಪಾತ್ರರಾಗಲಿದ್ದಾರೆ 'ಮಿಸ್ಟರ್ ಐಪಿಎಲ್' ಸುರೇಶ್ ರೈನಾ

ಇಂದಿನ ಪಂದ್ಯದಲ್ಲಿ ಈ ದಾಖಲೆಗೆ ಪಾತ್ರರಾಗಲಿದ್ದಾರೆ 'ಮಿಸ್ಟರ್ ಐಪಿಎಲ್' ಸುರೇಶ್ ರೈನಾ

ಇಂದು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಐಪಿಎಲ್ ನ 27ನೇ ಪಂದ್ಯ ನಡೆಯುತ್ತಿದ್ದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ಕಿಂಗ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದಿರುವ ಸುರೇಶ್ ರೈನಾ ಮೈದಾನಕ್ಕಿಳಿಯುತ್ತಿದ್ದಂತೆ ವಿಶೇಷ ದಾಖಲೆ ಮಾಡಲಿದ್ದಾರೆ.

ಐಪಿಎಲ್ ಕ್ರಿಕೆಟ್ ನಲ್ಲಿ ಇದುವರೆಗೂ ಸುರೇಶ್ ರೈನಾ‍ 199 ಪಂದ್ಯಗಳನ್ನಾಡಿದ್ದು ಇಂದು ಅವರ 200ನೇ ಪಂದ್ಯವಾಗಲಿದೆ. ಐಪಿಎಲ್ ಇತಿಹಾಸದಲ್ಲೇ 200 ಪಂದ್ಯವನ್ನಾಡಿದ ನಾಲ್ಕನೇ ಆಟಗಾರರಾಗಲಿದ್ದಾರೆ. ಎಂಎಸ್ ಧೋನಿ, ರೋಹಿತ್ ಶರ್ಮಾ, ಹಾಗೂ ದಿನೇಶ್ ಕಾರ್ತಿಕ್, ಬಳಿಕ ಇದೀಗ ಸುರೇಶ್ ರೈನಾ ಈ ಮೈಲಿಗಲ್ಲು ಸಾಧಿಸಲಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia