ನಿನ್ನೆ ( ಏಪ್ರಿಲ್ 7 ) ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 13ನೇ ಪಂದ್ಯ ನಡೆಯಿತು. ಮಳೆಯಿಂದಾಗಿ 11 ಓವರ್‌ಗೆ ಕಡಿತವಾಗಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 27 ರನ್‌ಗಳ ಜಯ ಕಂಡಿತು.
ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್‌ಗಳ ಅಬ್ಬರದ ಆಟದ ಮುಂದೆ ಮುಂಬೈ ಇಂಡಿಯನ್ಸ್ ಬೌಲರ್‌ಗಳು ಉತ್ತರವಿಲ್ಲದೇ ತತ್ತರಿಸಿಹೋದರು. ಅದರಲ್ಲೂ ವಿಶ್ವಶ್ರೇಷ್ಠ ಬೌಲರ್ ಎಂದೇ ಖ್ಯಾತಿಯನ್ನು ಪಡೆದಿರುವ ಜಸ್‌ಪ್ರೀತ್ ವಿಕೆಟ್ ಪಡೆಯದೇ ಮಂಕಾದರು.
ಹೌದು, 15 ವರ್ಷದ ವೈಭವ್ ಸೂರ್ಯವಂಶಿಗೆ ಇನ್ನಿಂಗ್ಸ್‌ನ ಎರಡನೇ ಓವರ್ ಎಸೆದ ಬುಮ್ರಾ ಎರಡು ಸಿಕ್ಸರ್ ಚಚ್ಚಿಸಿಕೊಂಡು ಒಟ್ಟು ಮೂರು ಓವರ್ ಬೌಲಿಂಗ್ ಮಾಡಿ 10.70 ಎಕಾನಮಿಯಲ್ಲಿ 32 ರನ್ ನೀಡಿ ವಿಕೆಟ್ ಇಲ್ಲದೇ ಬರಿಗೈನಲ್ಲಿ ಇನ್ನಿಂಗ್ಸ್ ಮುಗಿಸಿದರು. ಈ ಮೂಲಕ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನಾಡಿದರೂ ಬುಮ್ರಾ ಯಾವುದೇ ವಿಕೆಟ್ ಖಾತೆ ತೆರೆಯದೇ ಉಳಿದುಕೊಂಡಿದ್ದಾರೆ.
ಬುಮ್ರಾ ಮಾತ್ರವಲ್ಲದೇ ವಿವಿಧ ತಂಡಗಳ ಒಟ್ಟು 7 ಬೌಲರ್‌ಗಳು ಇಲ್ಲಿಯವರೆಗೂ ಯಾವುದೇ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರ ಪಟ್ಟಿ ಮುಂದಿದೆ.
- ಪಂಜಾಬ್ ಕಿಂಗ್ಸ್ ತಂಡದ ಅರ್ಷ್‌ದೀಪ್ ಸಿಂಗ್ ಇಲ್ಲಿಯವರೆಗೂ ಮೂರು ಪಂದ್ಯಗಳನ್ನಾಡಿದ್ದು, ಯಾವುದೇ ವಿಕೆಟ್ ಪಡೆದಿಲ್ಲ
- ಸನ್‌ರೈಸರ್ಸ್ ಹೈದರಾಬಾದ್ ತಂಡದ ಹರ್ಷಲ್ ಪಟೇಲ್ ಎರಡು ಪಂದ್ಯಗಳನ್ನಾಡಿದ್ದು ಯಾವುದೇ ವಿಕೆಟ್ ಪಡೆದಿಲ್ಲ.
- ಚೆನ್ನೈ ಸೂಪರ್ ಕಿಂಗ್ಸ್ ತಂಡದ ಖಲೀಲ್ ಅಹ್ಮದ್ ಮೂರು ಪಂದ್ಯಗಳನ್ನಾಡಿದ್ದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.
- ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮತ್ತೊರ್ವ ಬೌಲರ್ ಮೂರು ಪಂದ್ಯಗಳನ್ನಾಡಿದ್ದು ಯಾವುದೇ ವಿಕೆಟ್ ಪಡೆದಿಲ್ಲ.
- ಮುಂಬೈ ಇಂಡಿಯನ್ಸ್‌ನ ಟ್ರೆಂಟ್ ಬೌಲ್ಟ್ ಸಹ ಮೂರು ಪಂದ್ಯಗಳನ್ನಾಡಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.
- ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಎರಡು ಪಂದ್ಯಗಳನ್ನಾಡಿದ್ದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.

