Dailyhunt
IPL 2026: ಗುಜರಾತ್ ಬೌಲಿಂಗ್ ದಾಳಿಗೆ ತತ್ತರಿಸಿದ ಆರ್‌ಸಿಬಿ; ಗುಜರಾತ್‌ಗೆ ಸುಲಭ ಗುರಿ ನೀಡಿದ ಆರ್‌ಸಿಬಿ

IPL 2026: ಗುಜರಾತ್ ಬೌಲಿಂಗ್ ದಾಳಿಗೆ ತತ್ತರಿಸಿದ ಆರ್‌ಸಿಬಿ; ಗುಜರಾತ್‌ಗೆ ಸುಲಭ ಗುರಿ ನೀಡಿದ ಆರ್‌ಸಿಬಿ

ಇಂದು ( ಏಪ್ರಿಲ್ 30 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಲೀಗ್ ಹಂತದ 42ನೇ ಪಂದ್ಯ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಗುಜರಾತ್ ಟೈಟನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.

ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.2 ಓವರ್‌ಗಳಲ್ಲಿ 155 ರನ್‌ಗೆ ಆಲ್‌ಔಟ್ ಆಗಿ ಗುಜರಾತ್ ಟೈಟನ್ಸ್‌ ತಂಡಕ್ಕೆ 156 ರನ್‌ಗಳ ಸುಲಭ ಗುರಿಯನ್ನು ನೀಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದ ಜೇಕಬ್ ಬೆಥೆಲ್ 5 ಹಾಗೂ ವಿರಾಟ್ ಕೊಹ್ಲಿ 13 ಎಸೆತಗಳಲ್ಲಿ 28 ರನ್ ಬಾರಿಸಿದರು. ದೇವದತ್ ಪಡಿಕ್ಕಲ್ 40, ರಜತ್ ಪಟಿದಾರ್ 19, ಜಿತೇಶ್ ಶರ್ಮಾ 1, ಟಿಮ್ ಡೇವಿಡ್ 9, ಕೃನಾಲ್ ಪಾಂಡ್ಯ 4, ರೊಮಾರಿಯೊ ಶೆಫರ್ಡ್ 17, ಇಂಪ್ಯಾಕ್ಟ್ ಪ್ಲೇಯರ್ ವೆಂಕಟೇಶ್ ಐಯ್ಯರ್ 12, ಜೋಶ್ ಹೇಜಲ್‌ವುಡ್ ಡಕ್‌ಔಟ್ ಹಾಗೂ ಭುವನೇಶ್ವರ್ ಕುಮಾರ್ ಅಜೇಯ 15 ರನ್ ಗಳಿಸಿದರು.

ಆರ್‌ಸಿಬಿ ಕಾಡಿದ ಗುಜರಾತ್ ಟೈಟನ್ಸ್ ಪರ ಅರ್ಷದ್ ಖಾನ್ ಮೂರು ವಿಕೆಟ್, ಜೇಸನ್ ಹೋಲ್ಡರ್ ಹಾಗೂ ರಶೀದ್ ಖಾನ್ ತಲಾ ಎರಡು ವಿಕೆಟ್, ಮೊಹಮ್ಮದ್ ಸಿರಾಜ್ ಹಾಗೂ ಕಗಿಸೊ ರಬಾಡಾ ತಲಾ ಒಂದೊಂದು ವಿಕೆಟ್ ಪಡೆದರು.

Dailyhunt
Disclaimer: This content has not been generated, created or edited by Dailyhunt. Publisher: Kannada Dunia