ಮಡಿಕೇರಿ: ಕಾಡಾನೆ ಹಾಗೂ ಮಾನವ ಸಂಘರ್ಷ ಮುಂದುವರೆದಿದೆ. ಕಾಡಾನೆ ದಾಳಿಗೆ ಕಾಅಫಿ ಬೆಳೆಗಾರರೊಬ್ಬರು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ನಡೆದಿದೆ.
ಮೃತರನ್ನು ಕಾಯಿಮಾನಿ ನಿವಾಸಿ ರತ್ತು ಎಂದು ಗುರುತಿಸಲಾಗಿದೆ. ಎಂದಿನಂತೆ ರತ್ತು ಅವರು ತಮ್ಮ ಕಾಫಿ ತೋಟಕ್ಕೆ ಹೋಗಿದ್ದರು.
ಈ ವೇಳೆ ಏಕಾಏಕಿ ಎದುರಾಅದ ಕಾಡಾನೆ ದಾಳಿ ನಡೆಸಿದೆ. ಕಾಲಿನಿಂದ ತಿಳಿದು ರತ್ತು ಅವರನ್ನು ಸಾಯಿಸಿದೆ.
ಕಾಡಾನೆ ದಾಳಿಗೆ ಗಂಭೀರವಾಗಿ ಹಲ್ಲೆಗೊಳಗಾದ ರತ್ತು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಳೆದ ಕೆಲ ದಿನಗಳಿಂದ ಶ್ರೀಮಂಗಲ ಹೋಬಳಿಯ ಕಿರ್ಚಿ ಹಾಗೂ ಕಾಯಿಮಾನಿ ಭಾಗದಲ್ಲಿ 8-10 ಕಾಡಾನೆಗಳು ಬೀಡು ಬಿಟ್ಟಿವೆ. ಇದರಿಂದಾಗಿ ಆಭಾಗದ ಜನರು ತೋಟದ ಕೆಲಸಕ್ಕೆ ಹೋಗಲು ಜೀವಭಯದಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಹಿಂಡನ್ನು ಕಾಡಿಗೆ ಅಟ್ಟುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಡಾನೆ ದಾಳಿಯಿಂದ ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

